ಶಕುಂತಲ ಚಿತ್ರದಲ್ಲಿ ನಟಿಸುತ್ತಾರಾ ನಟಿ ಪೂಜಾ ಹೆಗ್ಡೆ

ಗುರುವಾರ, 24 ಡಿಸೆಂಬರ್ 2020 (10:17 IST)
ಹೈದರಾಬಾದ್ : ನಿರ್ದೇಶಕ ಗುಣಶೇಖರ್ ಅವರು ಶಕುಂತಲಂ ಎಂಬ ಚಿತ್ರ ಮಾಡಲು ಹೊರಟಿದ್ದು, ಈ ಚಿತ್ರವನ್ನು ವಿಭಿನ್ನ ಪ್ರೇಮ ಕಥೆಯನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಮುಂದಿನ ವರ್ಷದಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಇದೀಗ ಅವರು ಚಿತ್ರಕ್ಕೆ ನಾಯಕಿಯ ಆಯ್ಕೆಯಲ್ಲಿ ತೊಡಗಿದ್ದಾರೆ. ಅದರಂತೆ ಪೂಜಾ ಹೆಗ್ಡೆ ಶಕುಂತಲ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಬರುತ್ತಿದೆ ಎಂಬ ಸುದ್ದಿ ಬರುತ್ತಿದೆ.

ಅರವಿಂದರ ನಂತರ ಹಲವಾರು ದೊಡ್ಡ ಚಲನಚಿತ್ರಗಳಲ್ಲಿ ನಟಿಸುತ್ತಿರುವ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಚಿಟ್ ಚಾಟ್ ನಲ್ಲಿ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಅದರೊಂದಿಗೆ ಅವರು ಗುಣಶೇಖರ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿಯಿದೆ. ಈ ಬಗ್ಗೆ ಗುಣಶೇಖರ್ ಆಗಲಿ, ಪೂಜಾ ಹೆಗ್ಡೆಯಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ