ಟ್ವೀಟರ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಲಿವುಡ್ ನಟ ಯಾರು ಗೊತ್ತಾ?

ಗುರುವಾರ, 24 ಡಿಸೆಂಬರ್ 2020 (06:18 IST)
ಹೈದರಾಬಾದ್ : ಒಬ್ಬ ಚಿತ್ರ ನಟನ ಮೇಲೆ ಜನರ ಮೆಚ್ಚುಗೆ ಎಷ್ಟು ಎಂಬುದು ಸಾಮಾಜಿಕ ಮಾಧ್ಯಮದಲ್ಲಿ ಅವರು ತಮ್ಮ ಖಾತೆಗಳಲ್ಲಿ ಎಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ ಎಂಬುದರ ಮೂಲಕ ನಿರ್ಣಯಿಸಲಾಗುತ್ತದೆ. ಅದರಂತೆ ಈ ವಿಚಾರದಲ್ಲಿ ಟಾಲಿವುಡ್ ನ ಈ ಖ್ಯಾತ ನಟ ದಕ್ಷಿಣ ಭಾರತದ ಇನ್ನಿತರ ಖ್ಯಾತ ನಾಯಕರನ್ನು ಮೀರಿಸಿದ್ದಾರೆ ಎನ್ನಲಾಗಿದೆ.

ಹೌದು. ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ಅವರು ತಮ್ಮ ಟ್ವೀಟರ್ ಖಾತೆಯಲ್ಲಿ 11 ಮಿಲಿಯನ್ ಗಿಂತ ಅಧಿಕ ಅನುಯಾಯಿಗಳನ್ನು ಹೊಂದಿರುವ ಮೂಲಕ ಟಾಲಿವುಡ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕರಾಗಿ ಮುಂದುವರಿಸಿದ್ದಾರೆ. ಇವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿದ್ದು, ತಮ್ಮ, ಚಿತ್ರಗಳ ಬಗ್ಗೆ, ವೈಯಕ್ತಿಕ ವಿಚಾರಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಹಾಗಾಗಿ ಅವರು ಫಾಲೋವರ್ಸ್ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.

ಹಾಗೇ ಇವರು ಇನ್ ಸ್ಟಾಗ್ರಾಂನಲ್ಲಿ 6.1 ಮಿಲಿಯನ್, ಫೇಸ್ ಬುಕ್ ನಲ್ಲಿ 5.8 ಮಿಲಿಯನ್ ಫಾಲೋವರ್ಸ್ ನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ