ಶ್ರೀರಾಮ ಪಟ್ಟಾಭಿಷೇಕದಲ್ಲಿ ಮಂಥರೆಯಾಗಿ ಉಮಾಶ್ರೀ: ಯಕ್ಷಗಾನ ರಂಗಪ್ರವೇಶಕ್ಕೆ ಹಿರಿಯ ಚಿತ್ರನಟಿ ಸಜ್ಜು

Sampriya

ಶುಕ್ರವಾರ, 17 ಜನವರಿ 2025 (14:24 IST)
Photo Courtesy X
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಮಾಜಿ ಸಚಿವೆಯಾಗಿರುವ ಉಮಾಶ್ರೀ ಅವರು ಯಕ್ಷಗಾನ ರಂಗಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ.

ವಿಧಾನ ಪರಿಷತ್‌ ಸದಸ್ಯೆಯಾಗಿರುವ ಉಮಾಶ್ರೀ ಅವರು ಬಿಡುವು ಮಾಡಿ ಕೆಲವೊಂದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಯಕ್ಷಗಾನ ಕಲಾವಿದೆಯಾಗಿ ರಂಗಸಜ್ಜಿಕೆ ಏರಲು ಸಿದ್ಧತೆ ನಡೆಸಿದ್ದಾರೆ.

ಕಾರವಾರದ ಹೊನ್ನಾವರ ಪಟ್ಟಣದ ಸೆಂಟ್ ಅಂಥೋನಿ ಮೈದಾನದಲ್ಲಿ ಇಂದು ರಾತ್ರಿ 9.30 ರಿಂದ ನಡೆಯುವ ಶ್ರೀ ರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರಸಂಗದಲ್ಲಿ ಅವರು ಮಂಥರೆಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಪೆರ್ಡೂರಿನ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯು ಪ್ರದರ್ಶಿಸಲಿರುವ ಯಕ್ಷಗಾನದಲ್ಲಿ ಉಮಾಶ್ರೀ ಅವರು ಮಂಥರೆಯ ಪಾತ್ರಕ್ಕೆ ಬಣ್ಣ ಹಾಕುವರು. ಇದು ಅವರ ಚೊಚ್ಚಲ ಯಕ್ಷಗಾನ ಪ್ರದರ್ಶನವಾಗಿದೆ.

ಅವರು ಈಗಾಗಲೇ ಯಕ್ಷಗಾನ ವೇಷ ಧರಿಸಿ ಅಭ್ಯಾಸ ನಡೆಸಿದ್ದಾರೆ. ಇಂದು ಬೆಳಿಗ್ಗೆ ಹೊನ್ನಾವರಕ್ಕೆ ಬಂದಿದ್ದಾರೆ. ಹಿರಿಯ ಚಿತ್ರನಟಿ ಯಕ್ಷಗಾನದ ಪಾತ್ರಕ್ಕೆ ಬಣ್ಣ ಹೆಚ್ಚುವುದನ್ನು ನೋಡಲು ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ