ಗೃಹಪ್ರವೇಶ ಕರೆಯೋಲೆ ಜೊತೆಗೆ ಭಗವದ್ಗೀತೆ ಪುಸ್ತಕ ಹಂಚಿದ ನಟ ಅಜೇಯ್ ರಾವ್

Krishnaveni K

ಶನಿವಾರ, 13 ಏಪ್ರಿಲ್ 2024 (13:40 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟ ಅಜೇಯ್ ರಾವ್ ಈಗ ತಮ್ಮ ಗೃಹಪ್ರವೇಶಕ್ಕೆ ಸ್ಯಾಂಡಲ್ ವುಡ್ ಗಣ್ಯರನ್ನು ಕರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

ಪತ್ನಿ ಸಮೇತರಾಗಿ ಸ್ಯಾಂಡಲ್ ವುಡ್ ಸ್ನೇಹಿತರ ಮನೆಗೆ ಭೇಟಿ ನೀಡುತ್ತಿರುವ ಅಜೇಯ್ ರಾವ್ ಗೃಹಪ್ರವೇಶಕ್ಕೆ ಆಮಂತ್ರಣ ನೀಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಅನೇಕ ಗಣ್ಯರ ಮನೆಗೆ ಭೇಟಿ ಕೊಟ್ಟು ಅಜೇಯ್ ರಾವ್ ದಂಪತಿ ಗೃಹಪ್ರವೇಶಕ್ಕೆ ಆಮಂತ್ರಣ ನೀಡಿದೆ.

ಆದರೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದು ಅವರು ಆಮಂತ್ರಣದ ಜೊತೆಗೆ ನೀಡುತ್ತಿರುವ ಭಗವದ್ಗೀತೆ ಪುಸ್ತಕ. ದೈವ ಭಕ್ತರಾದ ಅಜೇಯ್ ರಾವ್ ಗೃಹಪ್ರವೇಶದ ಆಮಂತ್ರಣ ಪತ್ರಿಕೆ ಜೊತೆ ಎಲ್ಲಾ ಗಣ‍್ಯರಿಗೂ ಭಗವದ್ಗೀತೆ ಪುಸ್ತಕ ಹಂಚುತ್ತಿರುವುದು  ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ.

ಆಸ್ತಿಕತೆಯ ಬಗ್ಗೆ ಪ್ರಶ್ನೆ ಮಾಡುತ್ತಿರುವ ಈ ಕಾಲದಲ್ಲಿ ಅಜೇಯ್ ರಾವ್ ತಮ್ಮ ಧರ್ಮದ ಮೇಲಿನ ಪ್ರೀತಿಯಿಂದ ಭಗವದ್ಗೀತೆ ಪುಸ್ತಕವನ್ನು ಹಂಚುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ