ಜ್ಯೂ.ಎನ್ ಟಿಆರ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುತ್ರಿ ನಟನೆ?

ಸೋಮವಾರ, 17 ಜುಲೈ 2023 (16:19 IST)
ಹೈದರಾಬಾದ್: ಜ್ಯೂ. ಎನ್ ಟಿಆರ್ ನಾಯಕರಾಗಿರುವ ದೇವರ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಆರು ವರ್ಷದ ಅಲ್ಲು ಅರ್ಹ ಈಗಾಗಲೇ ಸಮಂತಾ ಋತು ಪ್ರಭು ಅವರ ಶಾಕುಂತಲಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಳು.

ಈಗ ದೇವರ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ. ಜ್ಯೂ.ಎನ್ ಟಿಆರ್ ಗೆ ಮಾಸ್ ಫ್ಯಾನ್ ಫಾಲೋವಿಂಗ್ ಇದೆ. ಅದರ ಜೊತೆಗೆ ಅಲ್ಲು ಅರ್ಜುನ್ ಅಭಿಮಾನಿಗಳ ಬೆಂಬಲವೂ ಸಿಕ್ಕರೆ ದೇವರ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ