ಪ್ರಶಾಂತ್ ನೀಲ್ ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಜ್ಯೂ.ಎನ್ ಟಿಆರ್

ಬುಧವಾರ, 7 ಜೂನ್ 2023 (08:50 IST)
Photo Courtesy: Twitter
ಹೈದರಾಬಾದ್: ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಜ್ಯೂ.ಎನ್ ಟಿಆರ್ ವಿಶೇಷ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ.

ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್ ಟಿಆರ್ ‘ಎನ್ ಟಿಆರ್31’ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಆದರೆ ಇಬ್ಬರ ನಡುವಿನ ಗೆಳೆತನ ಎಷ್ಟಿದೆ ಎಂಬುದಕ್ಕೆ ತಾರಕ್ ಕಳುಹಿಸಿದ ಈ ಗಿಫ್ಟ್ ಸಾಕ್ಷಿ. ಅಷ್ಟಕ್ಕೂ ಆ ಗಿಫ್ಟ್ ಏನು ಗೊತ್ತಾ?

ಪ್ರಶಾಂತ್ ನೀಲ್ ಗಾಗಿ ಜ್ಯೂ.ಎನ್ ಟಿಆರ್ ಮನೆಯಲ್ಲಿಯೇ ತಯಾರಿಸಿದ ಚಿಕನ್ ಕರಿ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಶಾಂತ್ ನೀಲ್ ಪತ್ನಿ ಲಿಖಿತಾ ಚಿಕನ್ ಕರಿ ಕಳುಹಿಸಿಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ