ತಂದೆಯಾದ ರಾಮ್ ಚರಣ್ ಅಲ್ಲು ಅರ್ಜುನ್, ಜ್ಯೂ.ಎನ್ ಟಿಆರ್ ಹೇಳಿದ್ದೇನು?!

ಮಂಗಳವಾರ, 20 ಜೂನ್ 2023 (17:17 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜ ಮತ್ತು ಉಪಾಸನಾ ದಂಪತಿ ಇಂದು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಉಪಾಸನಾ ಇಂದು ಮುಂಜಾನೆ ಹೆಣ‍್ಣು ಮಗುವಿಗೆ ಜನ್ಮ ನೀಡಿದರು. ಇದರೊಂದಿಗೆ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಇನ್ನು ರಾಮ್ ಚರಣ್ ಹೆಣ‍್ಣು ಮಗುವಿಗೆ ತಂದೆಯಾದ ಸುದ್ದಿ ತಿಳಿದ ತಕ್ಷಣ ನಟ ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡಿ ತಾಯಿ-ಮಗುವನ್ನು ನೋಡಿ ಬಂದಿದ್ದಾರೆ. ಇದಲ್ಲದೆ, ಟ್ವೀಟ್ ಮಾಡಿರುವ ಅವರು ರಾಮ್ ಚರಣ್ ಮತ್ತು ಉಪಾಸನಾಗೆ ಶುಭ ಹಾರೈಸಿದ್ದಾರೆ.

ಇನ್ನು, ರಾಮ್ ಚರಣ್ ಅವರ ಆರ್ ಆರ್ ಆರ್ ಸಿನಿಮಾದ ಕೋ ಸ್ಟಾರ್ ಜ್ಯೂ.ಎನ್ ಟಿಆರ್ ಕೂಡಾ ಟ್ವೀಟ್ ಮಾಡಿದ್ದು, ಪಿತೃತ್ವ ಗುಂಪಿಗೆ ಸ್ವಾಗತ ಎಂದಿದ್ದಾರೆ. ಇವರು ಮಾತ್ರವಲ್ಲದೆ, ಮಹೇಶ್ ಬಾಬು, ನಾನಿ, ಬೋನಿ ಕಪೂರ್,ಶರ್ವಾನಂದ, ಶ್ರೀಲೀಲಾ ಸೇರಿದಂತೆ ಅನೇಕರು ಟ್ವೀಟ್ ಮಾಡಿ ರಾಮ್ ಚರಣ್ ದಂಪತಿಗೆ ಶುಭ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ