ಹೈದರಾಬಾದ್ : ತೆಲುಗು ನಟ ನಿಖಿಲ್ ಸಿದ್ಧಾರ್ಥ್ ಅವರು ತುರ್ತು ಔಷಧಿಗಳನ್ನು ವಿತರಿಸುವಾಗ ಪೊಲೀಸರು ಅವರನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
8 ಪುಟಗಳ ವಿವರಣೆ ಬರೆಯುವ ಮೂಲಕ ಈ ವಿಚಾರವನ್ನು ನಟ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ದೃಢಪಡಿಸಿದ್ದಾರೆ. “ನಾನು ತುರ್ತು ಜೀವ ಉಳಿಸುವ ಔಷಧಿಗಳನ್ನು ಉಪ್ಪಲ್ ನಿಂದ ಕಿಮ್ಸ್ ಮಂತ್ರಿ ರಸ್ತೆಗೆ ತಲುಪಿಸುವ ಹಾದಿಯಲ್ಲಿದ್ದಾಗ ರೋಗಿಯ ವಿವರಗಳನ್ನು ನೀಡುವಂತೆ ನನ್ನನ್ನು ಹೈದರಾಬಾದ್ ನ ಪೊಲೀಸರು ತಡೆದು ವಾಪಾಸು ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಅನುಮತಿ ಇದ್ದರೂ ಪೊಲೀಸರ ಈ ವರ್ತನೆ ತಮಗೆ ಬೇಸರ ತಂದಿರುವುದಾಗಿ ತಿಳಿಸಿದ್ದಾರೆ.