ಪುಷ್ಪ 2 ನಲ್ಲಿ ಬದಲಾಗಲಿದೆಯಾ ಅಲ್ಲು ಅರ್ಜುನ್ ಲುಕ್?

ಭಾನುವಾರ, 11 ಸೆಪ್ಟಂಬರ್ 2022 (09:10 IST)
ಹೈದರಾಬಾದ್: ಪುಷ್ಪ 2 ಸಿನಿಮಾ ಇನ್ನೇನು ಶೂಟಿಂಗ್ ಆರಂಭಿಸುತ್ತಿದೆ. ಇದಕ್ಕೆ ಮೊದಲು ಅಲ್ಲು ಅರ್ಜುನ್ ಲುಕ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಪುಷ್ಪ ಭಾಗ 1 ರಲ್ಲಿ ಅಲ್ಲು ಅರ್ಜುನ್ ಡಿ ಗ್ಲಾಮರಸ್ ಆಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಭಾಗ 2 ರಲ್ಲಿ ಅಲ್ಲು ಅರ್ಜುನ್ ತಮ್ಮ ಲುಕ್ ಬದಲಾಯಿಸಿಕೊಳ್ಳಲು ಪ್ರಯೋಗ ಮಾಡುತ್ತಿದ್ದಾರಂತೆ.

ಕಿವಿಗೆ ರಿಂಗ್ ಹಾಕಿಕೊಂಡು ಅಥವಾ ಮೈ ತುಂಬಾ ಟ್ಯಾಟೂ ಹಾಕಿಕೊಂಡಿರುವ ಹೊಸ ಲುಕ್ ಬಗ್ಗೆ ಅಲ್ಲು ಅರ್ಜುನ್ ಪ್ರಯೋಗ ನಡೆಸುತ್ತಿದ್ದಾರಂತೆ. ಒಟ್ಟಾರೆ ಭಾಗ 1 ರಿಂದ ವ್ಯತ್ಯಸ್ಥವಾಗಿ ಕಾಣಿಸಿಕೊಳ್ಳಲು ಅಲ್ಲು ಅರ್ಜುನ್ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ