ಕೆಜಿಎಫ್ 2 ನಲ್ಲಿ ಅನಂತ್ ನಾಗ್ ಇರಲ್ಲ ಎಂಬ ಗಾಳಿ ಸುದ್ದಿಗೆ ಸ್ಪಷ್ಟನೆ

ಬುಧವಾರ, 26 ಫೆಬ್ರವರಿ 2020 (10:10 IST)
ಬೆಂಗಳೂರು: ಕೆಜಿಎಫ್ 1 ನಲ್ಲಿ ಹಿರಿಯ ನಟ ಅನಂತ್ ನಾಗ್ ಮಾಡಿದ್ದ ಪಾತ್ರ ಇಂದಿಗೂ ಜನರ ಮನಸ್ಸಲ್ಲಿ ಅಚ್ಚಳಿಯದೇ ಇದೆ. ಈ ಪಾತ್ರ ಕೆಜಿಎಫ್ 2 ನಲ್ಲಿ ಇರಲ್ಲ. ಎರಡನೇ ಭಾಗದಿಂದ ಅನಂತ್ ನಾಗ್ ಹೊರ ನಡೆದಿದ್ದಾರೆ ಎಂಬಿತ್ಯಾದಿ ಗಾಳಿ ಸುದ್ದಿ ಹರಿದಾಡುತ್ತಿತ್ತು.


ಚಿತ್ರತಂಡದೊಂದಿಗೆ ಮನಸ್ತಾಪವಾಗಿ ಅನಂತ್ ನಾಗ್ ಕೆಜಿಎಫ್ 2 ತಂಡದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಆನ್ ಲೈನ್ ನಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಈಗ ಯಶ್ ಸಮೀಪವರ್ತಿಗಳೇ ಅಲ್ಲಗಳೆದಿದ್ದಾರೆ.

ಈ ಪಾತ್ರವನ್ನು ಅನಂತ್ ನಾಗ್ ಹೊರತಾಗಿ ಬೇರೆ ಯಾರಾದರೂ ಮಾಡಲು ಸಾಧ್ಯವೇ? ಇಂತಹ ಗಾಳಿ ಸುದ್ದಿಗಳನ್ನೆಲ್ಲಾ ನಂಬಬೇಡಿ. ಕೆಜಿಎಫ್ 2 ನಲ್ಲೂ ಅನಂತ್ ನಾಗ್ ಇದ್ದೇ ಇರುತ್ತಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಇಂತಹ ವದಂತಿಗಳಿಗೆ ಬ್ರೇಕ್ ಬಿದ್ದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ