ಮಾಯಾಬಜಾರ್ ಚಿತ್ರದ ಯಶಸ್ಸಿಗೆ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪುನೀತ್ ರಾಜಕುಮಾರ್

ಬುಧವಾರ, 26 ಫೆಬ್ರವರಿ 2020 (09:26 IST)
ಬೆಂಗಳೂರು: ಪುನೀತ್ ರಾಜಕುಮಾರ್ ತಮ್ಮ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸುತ್ತಿರುವ ಚಿತ್ರ ಮಾಯಾಬಜಾರ್ 2016 ಇದೇ ವಾರಂತ್ಯಕ್ಕೆ ಅಂದರೆ ಫೆಬ್ರವರಿ 28 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 
ಇದು ಪುನೀತ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾವಾಗಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಯಾಬಜಾರ್ ಸಿನಿಮಾದಲ್ಲಿ ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್, ಸುಧಾರಾಣಿ, ಚೈತ್ರಾ ರಾವ್ ಮುಂತಾದವರು ನಟಿಸಿದ್ದಾರೆ. ನೋಟು ಅಮಾನ್ಯದ ಸಂದರ್ಭದ ಕತೆಯುಳ್ಳ ಈ ಸಿನಿಮಾದ ಟ್ರೈಲರ್ ಈಗಾಗಲೇ ಭಾರೀ ಲೈಕ್ಸ್ ಪಡೆದಿದೆ.

ತಮ್ಮ ನಿರ್ಮಾಣ ಸಂಸ್ಥೆಯ ಎರಡನೇ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ನಾಡದೇವತೆ ಮೈಸೂರಿನ ಚಾಮುಂಡೇಶ್ವರಿಗೆ ಪುನೀತ್ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ