ಡ್ರಗ್ ಮಾಫಿಯಾ: ಕೆಲವೇ ಕ್ಷಣಗಳಲ್ಲಿ ವಿಚಾರಣೆಗೆ ಹಾಜರಾಗಲಿರುವ ಆಂಕರ್ ಅನುಶ್ರೀ

ಶುಕ್ರವಾರ, 25 ಸೆಪ್ಟಂಬರ್ 2020 (12:08 IST)
ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಪಟ್ಟಂತೆ ಆಂಕರ್ ಅನುಶ್ರೀ ತಮ್ಮ ತವರು ಮಂಗಳೂರಿನ ಸಿಸಿಬಿ ಕಚೇರಿಗೆ ವಿಚಾರಣೆಗಾಗಿ ಆಗಮಿಸುತ್ತಿದ್ದಾರೆ.


ಅನುಶ್ರೀ ಇಂದು ಬೆಳಿಗ್ಗೆ ಕಾರಿನ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅವರು ಮಂಗಳೂರು ತಲುಪಲಿದ್ದಾರೆ. ಅವರನ್ನು ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದ ಪೊಲೀಸರ ತಂಡ ವಿಚಾರಣೆ ನಡೆಸಲಿದೆ. ಡ್ರಗ್ ಪೆಡ್ಲರ್, ಡ್ಯಾನ್ಸಿಂಗ್ ಸ್ಟಾರ್ ಕಿಶೋರ್ ಶೆಟ್ಟಿ ತಾನು ಆಯೋಜಿಸಿದ್ದ ಪಾರ್ಟಿಯಲ್ಲಿ ಅನುಶ್ರೀ ಕೂಡಾ ಪಾಲ್ಗೊಂಡಿದ್ದರು ಎಂದಿದ್ದ. ಹೀಗಾಗಿ ಪೊಲೀಸರು ಅನುಶ್ರೀಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ