ಕೊರೋನಾಗೆ ಬಲಿಯಾದ ಆತ್ಮೀಯರ ಸಾವಿನ ದುಃಖ ಹಂಚಿಕೊಂಡ ನಟ ಅನಿರುದ್ಧ್

ಶನಿವಾರ, 24 ಏಪ್ರಿಲ್ 2021 (10:01 IST)
ಬೆಂಗಳೂರು: ಕೊರೋನಾಗೆ ಬಲಿಯಾದ ಆತ್ಮೀಯರೊಬ್ಬರ ಸಾವಿನ ದುಃಖವನ್ನು ನಟ ಅನಿರುದ್ಧ್ ಅಭಿಮಾನಿಗಳೊಂದಿಗೆ ಹಂಚಿಕೊಂಡು ಭಾವುಕರಾಗಿದ್ದಾರೆ.


ಮೊನ್ನೆಯಷ್ಟೇ ತಮಗೆ ಅತ್ಯಂತ ಆತ್ಮೀಯರಾಗಿದ್ದವರೊಬ್ಬರು ಕೊರೋನಾದಿಂದ ತೀರಿಕೊಂಡರು. ಅವರಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆ ಸಿಗದೇ ಪರದಾಡಬೇಕಾಯಿತು ಎಂದು ಅನಿರುದ್ಧ್ ಹೇಳಿದ್ದಾರೆ.

‘ನಮ್ಮ ಆತ್ಮೀಯರೊಬ್ಬರ ಸಾವಾಗಿದೆ. ನಾನೂ ಸಹಿತ ನಾವೆಲ್ಲರೂ ಆಸ್ಪತ್ರೆಗಾಗಿ ಸಾಕಷ್ಟು ಕರೆಗಳನ್ನು ಮಾಡಿದೆವು. ರೆಮ್ ಡಿಸೀವರ್ ಇಂಜಕ್ಷನ್ ಬ್ಲ್ಯಾಕ್ ನಲ್ಲಿ ಮಾರಾಟವಾಗುತ್ತಿದೆ. ಅದೂ ಸುಲಭಕ್ಕೆ ಸಿಗಲ್ಲ. ಸಾಕಷ್ಟು ಪ್ರಯತ್ನಪಡಬೇಕಾಗುತ್ತದೆ. ಅವರು ಸಾವನ್ನಪ್ಪಿದಾಗ ಅಂತ್ಯಸಂಸ್ಕಾರ ಮಾಡಲು ಬನಶಂಕರಿ ಚಿತಾಗಾರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಆಗಲೇ 40 ಆಂಬ್ಯುಲೆನ್ಸ್ ಗಳು ಕ್ಯೂನಲ್ಲಿದ್ದವು. ಹೀಗಾಗಿ ಕೆಂಗೇರಿಗೆ ಬಂದರು. ಅಲ್ಲಿ ಅವರಿಗೆ 17 ನೇ ನಂಬರ್ ಟೋಕನ್ ಸಿಕ್ಕಿತು. ನಾನು ಅಭಿಮಾನಿಗಳಲ್ಲಿ ಕೋರುವುದು ಇಷ್ಟೇ. ದಯವಿಟ್ಟು ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ನಿಮ್ಮ ಸುರಕ್ಷತೆಯಲ್ಲಿ ನೀವಿರಿ’ ಎಂದು ಅನಿರುದ್ಧ್ ಭಾವುಕರಾಗಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ