ಕಿರುತೆರೆಯಲ್ಲಿ ನಟ ಅನಿರುದ್ಧ ಹೊಸ ಜರ್ನಿ ಇಂದಿನಿಂದ ಶುರು

ಸೋಮವಾರ, 9 ಸೆಪ್ಟಂಬರ್ 2019 (09:33 IST)
ಬೆಂಗಳೂರು: ನಟ ಅನಿರುದ್ಧ್ ಇಷ್ಟು ದಿನ ಬೆಳ್ಳಿತೆರೆಯಲ್ಲಿ ಮಿಂಚಿದ್ದಾಯ್ತು. ಈಗ ಜೀ ವಾಹಿನಿಯ ಜೊತೆ ಜೊತೆಯಲಿ ಧಾರವಾಹಿ ಮೂಲಕ ನಾಯಕರಾಗಿ ಕಿರುತೆರೆಯಲ್ಲಿ ಮಿಂಚಲಿದ್ದಾರೆ.


ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಅನಿರುದ್ಧ್ ಇಷ್ಟು ದಿನ ಮಿಂಚಿದ್ದಾರೆ. ಈಗ ಜೊತೆ ಜೊತೆಯಲಿ ಎನ್ನುವ ಹೊಸ ಧಾರವಾಹಿ ಮೂಲಕ 45 ವರ್ಷದ  ಅವಿವಾಹಿತ ಉದ್ಯಮಿಯ ಪಾತ್ರ ನಿರ್ವಹಿಸಲಿದ್ದಾರೆ.

ಅನಿರುದ್ಧ್ ಗೆ ನಾಯಕಿಯಾಗಿ ಹೊಸ ಪ್ರತಿಭೆ ಮೇಘನಾ ಶೆಟ್ಟಿ ಅಭಿನಯಿಸಲಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಪ್ರೇಮಕತೆಯಾಗಿದ್ದು, ಆರೂರು ಜಗದೀಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರವಾಹಿಯ ಟೈಟಲ್ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ತುಂಬಾ ರಿಚ್ ಆಗಿ ಮೂಡಿದೆ. ಜತೆಗೆ ಇದರ ಮಾಧುರ್ಯ ನೋಡಿ ಸಾಮಾಜಿಕ ಜಾಲತಾಣದಲ್ಲಿ ಧಾರವಾಹಿ ವೀಕ್ಷಿಸಲು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ