ಡ್ಯಾನ್ಸ್ ಕರ್ನಾಟಕ ವೇದಿಕೆಯಲ್ಲಿ ಸದ್ಗುರು ಜಗ್ಗಿ ವಾಸುದೇವ್

ಬುಧವಾರ, 28 ಆಗಸ್ಟ್ 2019 (09:22 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಈ ಬಾರಿ ಸದ್ಗುರು ಜಗ್ಗಿ ವಾಸುದೇವ್ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.


ಕಾವೇರಿ ಕೂಗು ಅಭಿಯಾನದ ಪ್ರಮುಖ ರೂವಾರಿ ಸದ್ಗುರು ಸ್ವಾಮೀಜಿ ಡಿಕೆಡಿ ವೇದಿಕೆಯಲ್ಲೂ ಕಾವೇರಿ ಕಾಲಿಂಗ್ ಅಥವಾ ಕಾವೇರಿ ಕೂಗು ಅಭಿಯಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಸದ್ಗುರು ಜತೆ ಡಿಕೆಡಿ ತೀರ್ಪುಗಾರರಾದ ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯಾ ಫೋಟೋ ತೆಗೆಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ