ಕಾಮಿಡಿ ಕಂಪನಿ ಆಯ್ತು, ಈಗ ಜೀ ಕನ್ನಡ ಕಾಮಿಡಿ ಕಿಲಾಡಿಗಳ ಮೇಲೆ ವೀಕ್ಷಕರ ತಗಾದೆ

ಶನಿವಾರ, 7 ಸೆಪ್ಟಂಬರ್ 2019 (09:39 IST)
ಬೆಂಗಳೂರು: ಕಾಮಿಡಿ ಕಂಪನಿ ಎಂಬ ಕಲರ್ಸ್ ಕನ್ನಡದ ಶೋ ಬಗ್ಗೆ ವೀಕ್ಷಕರು ಅಪಸ್ವರವೆತ್ತಿದ ಬೆನ್ನಲ್ಲೇ ಇದೀಗ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋ ಬಗ್ಗೆಯೂ ವೀಕ್ಷಕರಿಂದ ತಗಾದ ಶುರುವಾಗಿದೆ.


ಕಾಮಿಡಿ ಶೋಗೆ ಅನುಭವವೇ ಇಲ್ಲದ ನಿವೇದಿತಾ ಗೌಡ  ಅವರಂತಹವರನ್ನು ಕರೆತಂದಿದ್ದಕ್ಕೆ ಕಲರ್ಸ್ ಕನ್ನಡ ಶೋ ಬಗ್ಗೆ ವೀಕ್ಷಕರು ಅಪಸ್ವರವೆತ್ತಿದ್ದರು. ಇದೀಗ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಾಸ್ಯದ ನೆಪದಲ್ಲಿ ಡಬಲ್ ಮೀನಿಂಗ್ ಸ್ಕಿಟ್ ಗಳೇ ಹೆಚ್ಚಾಗುತ್ತಿವೆ ಎಂಬ ಅಪಸ್ವರ ಕೇಳಿಬಂದಿದೆ.

ಜಗ್ಗೇಶ್, ಯೋಗರಾಜ್ ಭಟ್ ಮತ್ತು ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿರುವ ಕಾಮಿಡಿ ಕಿಲಾಡಿಗಳು ಶೋವನ್ನು ಮಕ್ಕಳೂ ಸಹಿತ ಕುಟುಂಬ ಸಮೇತ ವೀಕ್ಷಿಸುತ್ತಾರೆ. ಹಾಗಿರುವಾಗ ಹಾಸ್ಯದ ನೆಪದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳೇ ಹೆಚ್ಚಾಗುತ್ತಿವೆ. ಇದರಿಂದ ಕುಟುಂಬ ಸಮೇತ ಕಾರ್ಯಕ್ರಮ ವೀಕ್ಷಿಸಲು ಮುಜುಗರವಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾ ಮುಖಾಂತರ ವೀಕ್ಷಕರು ಆಕ್ಷೇಪಿಸಿದ್ದಾರೆ. ವೀಕ್ಷಕರ ಅಭಿಪ್ರಾಯಕ್ಕೆ ಜೀ ವಾಹಿನಿ ಬೆಲೆ ಕೊಟ್ಟು ಇಂತಹ ಡೈಲಾಗ್ ಗಳನ್ನು ಕಡಿಮೆ ಮಾಡುತ್ತಾ ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ