ಇದರಲ್ಲಿ ನಿಶಾ ಮತ್ತು ವಿಕಾಸ್ ಎಷ್ಟು ರೊಮ್ಯಾಂಟಿಕ್ ಆಗಿದ್ದಾರೆಂದರೆ ನಿಜ ಜೀವನದಲ್ಲೂ ಇವರ ನಡುವೆ ಏನೋ ಇದೆ ಎಂದು ಸಂಶಯಪಡುವಂತಿದೆ. ಇತ್ತೀಚೆಗೆ ಜೀ ಕನ್ನಡ ಕಾರ್ಯಕ್ರಮದಲ್ಲಿ ನಿಶಾ ಟ್ರೂತ್ ಆರ್ ಡೇರ್ ಆಡುವಾಗ ತಮ್ಮ ತಾಯಿಗೆ ಕರೆ ಮಾಡಿ ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಯಾರು ಎಂದು ಕೇಳಿದಾಗ ಅದೇ ವಿಕಾಸ್ ಎಂದು ಹೇಳ್ತಾರೆ. ಅದಕ್ಕೆ ಗೊತ್ತಲ್ಲ ಮುಂದೆ ಹೇಳು ಎಂದಾಗ ಎಲ್ಲರೂ ಶಾಕ್ ಆಗ್ತಾರೆ. ಹೀಗಾಗಿ ಇಬ್ಬರೂ ಪ್ರೀತಿಸುತ್ತಿದ್ದಾರೇನೋ ಎಂಬ ಅನುಮಾನ ಅಭಿಮಾನಿಗಳಿಗೆ ಶುರುವಾಗಿತ್ತು.