ಪ್ರಭಾಸ್ ಸಾಹೊ ಟೀಸರ್ ನೋಡಿ ಅನುಷ್ಕಾ ಶೆಟ್ಟಿ ಹೇಳಿದ್ದೇನು?!

ಭಾನುವಾರ, 16 ಜೂನ್ 2019 (09:19 IST)
ಹೈದರಾಬಾದ್: ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಾಹೋ ಟೀಸರ್ ಈಗ ಭಾರೀ ವೈರಲ್ ಆಗಿದೆ. ಸಾಹೋ ಟೀಸರ್ ಬಗ್ಗೆ ಅನುಷ್ಕಾ ಶೆಟ್ಟಿ ಏನು ಹೇಳಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ.


ಬಾಹುಬಲಿ ಖ್ಯಾತಿ ಈ ಆನ್ ಸ್ಕ್ರೀನ್ ಜೋಡಿ ನಿಜ ಜೀವನದಲ್ಲೂ ಮದುವೆಯಾಗಬೇಕು ಎಂಬುದು ಅಭಿಮಾನಿಗಳ ಆಸೆ. ಹಾಗೆಯೇ ಇವರ ನಡುವೆ ಹಲವು ಬಾರಿ ಗಾಸಿಪ್ ಹುಟ್ಟಿಕೊಂಡಿತ್ತು. ಆದರೆ ಇಬ್ಬರೂ ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ.

ಇದೀಗ ಪ್ರಭಾಸ್ ಸಾಹೋ ನೋಡಿ ಅನುಷ್ಕಾ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಮೆಚ್ಚುಗೆಯ ಮಾತನಾಡಿದ್ದಾರೆ. ‘ಸಾಹೋ ಟೀಸರ್ ಅದ್ಭುತವಾಗಿದೆ. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಪ್ರಭಾಸ್, ಸಜೀತ್ ಎಲ್ಲರಿಗೂ ಅಭಿನಂದನೆ. ಸಾಹೋಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ. ಅನುಷ್ಕಾ ಬರೆದ ಈ ಕಾಮೆಂಟ್ ನ್ನು ನೋಡಿ ಅಭಿಮಾನಿಗಳು ಭಾರೀ ಲೈಕ್ಸ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ