ಇನ್ನೀಗ ಗ್ಯಾರಂಟಿ ಐಶ್ವರ್ಯಾ ಸರ್ಜಾ-ಉಮಾಪತಿ ಮದುವೆ!

ಬುಧವಾರ, 28 ಜೂನ್ 2023 (09:20 IST)
Photo Courtesy: Instagram

ಚೆನ್ನೈ: ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ತಮಿಳು ಪೋಷಕ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿತ್ತು. ಅದೀಗ ಅಧಿಕೃತವಾಗಿದೆ.

ಸ್ವತಃ ಉಮಾಪತಿ ತಂದೆ ತಂಬಿ ರಾಮಯ್ಯ ಅವರೇ ಮದುವೆ ವಿಚಾರವನ್ನು ದೃಢಪಡಿಸಿದ್ದಾರೆ. ತಮ್ಮ ಮಗ ಉಮಾಪತಿ ಹಾಗೂ ಐಶ್ವರ್ಯಾ ಮದುವೆ ಮುಂದಿನ ವರ್ಷ ಜನವರಿಯಲ್ಲಿ ಮಾಡಲಾಗುತ್ತಿದೆ ಎಂದಿದ್ದಾರೆ.

ಉಮಾಪತಿ ಕೂಡಾ ನಟರಾಗಿದ್ದು, ಐಶ್ವರ್ಯಾ ಜೊತೆ ಕೆಲವು ಸಮಯದಿಂದ ಪ್ರೀತಿಯಲ್ಲಿದ್ದರು. ಈ ಪ್ರೀತಿಗೆ ಎರಡೂ ಮನೆಯವರ ಒಪ್ಪಿಗೆಯೂ ದೊರೆತಿದೆ. ಹೀಗಾಗಿ ಎರಡೂ ಕುಟುಂಬಗಳು ಸೇರಿ ಮದುವೆ ಮಾಡಿಸಲು ತೀರ್ಮಾನಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ