ದೊಡ್ಮಗ ದರ್ಶನ್ ಜೈಲಿನಲ್ಲಿರುವಾಗ ಸರಳವಾಗಿ ನೆರವೇರಿದ ಅಂಬರೀಶ್ ಸೊಸೆ ಅವಿವಾ ಸೀಮಂತ

Krishnaveni K

ಸೋಮವಾರ, 16 ಸೆಪ್ಟಂಬರ್ 2024 (12:00 IST)
Photo Credit: Instagram
ಬೆಂಗಳೂರು: ಒಂದೆಡೆ ತಮ್ಮ ದೊಡ್ಮಗ ಎಂದೇ ಕರೆಯುವ ದರ್ಶನ್ ಜೈಲಿನಲ್ಲಿದ್ದರೆ ಇತ್ತ ಸುಮಲತಾ ಅಂಬರೀಶ್ ತಮ್ಮ ಸೊಸೆ ಅವಿವಾ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಆ ಮೂಲಕ ಅಂಬಿ ಕುಟುಂಬಕ್ಕೆ ಮೊಮ್ಮಗು ಬರುವ ವಿಚಾರ ಈಗ ಅಧಿಕೃತವಾಗಿದೆ.

ಕೆಲವು ದಿನಗಳ ಹಿಂದೆ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಅಂಬಿ ಕುಟುಂಬದಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಆದರೆ ಇದೀಗ ಕುಟುಂಬಸ್ಥರು, ಸಿನಿ ಸ್ನೇಹಿತರ ಸಮ್ಮುಖದಲ್ಲಿ ಅವಿವಾ ಸೀಮಂತ ಶಾಸ್ತ್ರ ನೆರವೇರಿದೆ.

ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಿರುವ ನಟಿ ಪ್ರಿಯಾಂಕ ಉಪೇಂದ್ರ ಸೇರಿದಂತೆ ಕೆಲವು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ಅಂಬಿ ಮನೆಗೆ ಮೊಮ್ಮಗು ಬರುತ್ತಿರುವ ವಿಚಾರ ಕನ್ ಫರ್ಮ್ ಆಗಿದೆ. ಬಹುಶಃ ದರ್ಶನ್ ಜೈಲಿನಲ್ಲಿರುವ ಕಾರಣಕ್ಕೋ ಏನೋ ಸುಮಲತಾ ಈ ಸೀಮಂತ ಶಾಸ್ತ್ರವನ್ನು ಬಹಿರಂಗಪಡಿಸಿರಲಿಲ್ಲ.

ಆದರೆ ಅಂಬರೀಶ್ ಕುಟುಂಬ ಎಂದರೆ ಚಿತ್ರರಂಗದಲ್ಲಿ ಸ್ನೇಹಿತರ ಬಳಗ ದೊಡ್ಡದು. ಅದೇ ರೀತಿ ಅಭಿಮಾನಿಗಳೂ ಅವರ ಕುಟುಂಬದ ಮೇಲಿಟ್ಟಿರುವ ಪ್ರೀತಿ ದೊಡ್ಡದು. ಇದೀಗ ಅವಿವಾ ಗರ್ಭಿಣಿ ಎನ್ನುವ ವಿಚಾರ ತಿಳಿದು ಎಲ್ಲಕ್ಕಿಂತ ಹೆಚ್ಚು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಕೊನೆಗೂ ಮರಿ ಅಂಬಿ ಬರುತ್ತಿದ್ದಾರೆ ಎಂದು ಸಂಭ್ರಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ