ನಟ ಕಿಚ್ಚ ಸುದೀಪ್ ಗೆ ಸಚಿವ ಬಿ ಶ್ರೀರಾಮುಲು ಅಭಿನಂದನೆ

ಬುಧವಾರ, 12 ಆಗಸ್ಟ್ 2020 (10:57 IST)
ಬೆಂಗಳೂರು: ಸರ್ಕಾರಿ ಶಾಲೆಗಳನ್ನು ದತ್ತು ತೆಗೆದು ಅಭಿವೃದ್ಧಿಗೆ ಶ್ರಮಿಸುತ್ತಿರುವ ನಟ ಕಿಚ್ಚ ಸುದೀಪ್ ಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಅಭಿನಂದಿಸಿದ್ದಾರೆ.


ಚಿತ್ರದುರ್ಗದಲ್ಲಿ ನಾಲ್ಕು ಶಾಲೆಗಳನ್ನು ದತ್ತು ಪಡೆದಿದ್ದ ಕಿಚ್ಚ, ಮೊನ್ನೆಯಷ್ಟೇ ತಮ್ಮ ತವರು ಶಿವಮೊಗ್ಗದ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಮುಂದಾಗಿದ್ದಾರೆ.

ಅವರ ಈ ಕಾರ್ಯವನ್ನು ಸಚಿವ ಬಿ ಶ್ರೀರಾಮುಲು ಕೊಂಡಾಡಿದ್ದು, ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಮಾದರಿಯಾಗಿ ನಡೆದುಕೊಳ್ಳುವ ನಟನಿಗೆ ಸಾರ್ವಜನಿಕರ ಪರವಾಗಿ ಅಭಿನಂದಿಸುತ್ತೇನೆ ಎಂದು ರಾಮುಲು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ