ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಬಾಹುಬಲಿ-2 ಮಾಡಿದ ದಾಖಲೆಗಳೆಷ್ಟು ಗೊತ್ತಾ..?

ಸೋಮವಾರ, 8 ಮೇ 2017 (21:02 IST)
ಐದು ವರ್ಷಗಳ ಹಿಂದೆ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿಯನ್ನ ಜೊತೆ ಮಾಡಿ ರಾಜಮೌಳಿ ಬಾಹುಬಲಿ ಸಾಹಸಕಕೆ ಕೈಹಾಕಿದಾಗ ಬಹುಶಃ ಈ ಚಿತ್ರ ಇತಿಹಾಸ ನಿರ್ಮಿಸುತ್ತೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಮೊದಲ ಭಾಗದಲ್ಲಿ ವಿಶ್ವಾದ್ಯಂತ ಹೆಸರು ಮಾಡಿದ್ದ ಬಾಹುಬಲಿ, ಅದ್ಬುತ ಸ್ಟೋರಿ, ಮೇಕಿಂಗ್, ಯುದ್ಧದ ಅವಿಸ್ಮರಣೀಯ ಕ್ಷಣಗಳು, ವಿಶಿಷ್ಟ ಡೈಲಾಗ್ ಡೆಲಿವರಿ.. ಹೀಗೆ ಹತ್ತು ಹಲವು ವಿಷಯಗಳಿಂದ ಜನ ಮನನಣೆ ಗಳಿಸಿತ್ತು. ಇದೀಗ ಬಾಹುಬಲಿ-2 ಎಲ್ಲ ದಾಖಲೆಗಳನ್ನ ಪುಡಿಗಟ್ಟಿದೆ.
 

ಬಿಡುಗಡೆಯಾದ ಹತ್ತೇ ದಿನಕ್ಕೆ ಬಾಹುಬಲಿ-2 ಹಲವು ದಾಖಲೆಗಳನ್ನ ಮುರಿದು ಮುಂದೆ ಸಾಗುತ್ತಿದೆ.

1. 1000 ಕೋಟಿ ಗಳಿಕೆ ಕಂಡ ಮೊದಲ ಭಾರತೀಯ ಚಿತ್ರ: ಬಿಡುಗಡೆಯಾದ ಹತ್ತೇ ದಿನಕ್ಕೆ 1000 ಕೋಟಿ ರೂ. ಗಳಿಕೆ ಕಂಡಿರುವ ಬಾಹುಬಲಿ-2 ಈ ಸಾಧನೆ ಮಾಡಿದ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಬಾಲಿವುಡ್ ಚಿತ್ರಗಳೇ ಮಾಡಲಾಗದ ಸಾಧನೆಯನ್ನ ಬಾಹುಬಲಿ ಮಾಡಿದೆ.

2. ಮೊದಲ ದಿನವೇ ಗರಿಷ್ಠ ಗಳಿಕೆ: ಬಿಡುಗಡೆಯಾದ ದಿನವೇ ಬಾಹುಬಲಿ-2 ವಿಶ್ವಾದ್ಯಂತ 124 ಕೋಟಿ ಗಳಿಸಿತ್ತು. ಬಾಹುಬಲಿಯನ್ನ ಕಟ್ಟಪ್ಪ ಕೊಂದದ್ದೇಕೆ? ಎಂಬ ಕುತೂಹಲಕಾರಿ ಅಂಶ ಅಭಿಮಾನಿಗಳನ್ನ ಥಿಯೇಟರ್`ಗಳತ್ತ ಸೆಳೆದಿತ್ತು.

3. ಅಮೆರಿಕದಲ್ಲೇ 100 ಕೋಟಿ: ಅಮೆರಿಕದಲ್ಲಿ 100 ಕೋಟಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಬಾಹುಬಲಿ. ಇನ್ನೂ ಸಹ ಅಮೆರಿಕದ ಚಿತ್ರಮಂದಿರದಲ್ಲಿ ಬಾಹುಬಲಿ ಪ್ರದರ್ಶನ ಕಾಣುತ್ತಿದೆ.

4. ಮೊದಲ ದಿನವೇ ಡಬ್ಬಿಂಗ್ ಸಿನಿಮಾ ಗಳಿಸಿದ ದೊಡ್ಡ ಮೊತ್ತ: ಹಿಂದಿ ಭಾಷೆಗೆ ಡಬ್ ಆಗಿದ್ದ ಬಾಹುಬಲಿ-2 ಮೊದಲ ದಿನವೇ 40 ಕೋಟಿ ಗಳಿಸಿತ್ತು. ಇದು ಇದುವರೆಗಿನ ಸಾರ್ವಕಾಲಿಕ ದಾಖಲೆ. ಖಾನ್`ತ್ರಯರ ಸಿನಿಮಾಗಳೇ ಇಷ್ಟು ಇಂಪ್ಯಾಕ್ಟ್ ಮಾಡಿಲ್ಲ.

ಇದರ ಜೊತೆಗೆ ಮೊದಲ ದಿನವೇ 100 ಕೋಟಿ ದಾಟಿದ ಭಾರತ ಸಿನಿಮಾ, ಅತ್ಯಧಿಕ 9000 ಸ್ಕ್ರೀನ್`ಗಳಲ್ಲಿ ತೆರೆ ಕಂಡ ಮೊದಲ ಭಾರತೀಯ ಸಿನಿಮಾ ಎಂಬ ಹಲವು ದಾಖಲೆಗಳನ್ನ ಬಾಹುಬಲಿ-2 ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ