ಬೆನ್ನು ನೋವು ನಾಪತ್ತೆ, ತಲೆ ಮೇಲೆ ಕೂದಲು: ಡಿ ಬಾಸ್ ದರ್ಶನ್ ಈಸ್ ಬ್ಯಾಕ್

Sampriya

ಗುರುವಾರ, 9 ಜನವರಿ 2025 (19:40 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಇದೀಗ ಛೂ ಮಂತರ್ ಸಿನಿಮಾ ಸೆಟ್‌ ಸರ್ಪ್ರೈಸ್ ಆಗಿ ವಿಸಿಟ್ ನೀಡಿದ್ದಾರೆ.

ಈ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆನ್ನು ನೋವಿನಿಂದ ಚೇತರಿಸಿಕೊಂಡಿರುವ ದರ್ಶನ್ ಅವರು ತಲೆ ಮೇಲೆ ಕೂದಲಿನೊಂದಿಗೆ ಕಪ್ಪು ಟೀ ಸರ್ಟ್, ಕೂಲಿಂಗ್ ಗ್ಲಾಸ್‌ ಹಾಕಿಕೊಂಡು ಸೆಟ್‌ಗೆ ಬಂದಿದ್ದಾರೆ. ಈ ವೇಳೆ ದರ್ಶನ್‌ರನ್ನು ನಟರಾದ ಶರಣ್ ಹಾಗೂ ಚಿಕ್ಕಣ್ಣ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಅದಲ್ಲದೆ ಶರಣ್ ಜತೆ ಕೆಲಕಾಲ ಹರಟೆ ಮಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಮಗುವನ್ನು ಮುದ್ದಾಡಿದ್ದಾರೆ.

ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನು ಮುಖಾಂತರ ಹೊರಬಂದಿರುವ ದರ್ಶನ್ ಅವರು ಕೆಲ ತಿಂಗಳಿನಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಆದರೆ ಇದೀಗ ಆರಾಮಾಗಿ ಛೂ ಮಂತರ್ ಸಿನಿಮಾ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ