ಬಾಹುಬಲಿ ಪ್ರಭಾಸ್ ಹೊಡೆದಾಟಕ್ಕೇ ಇಷ್ಟೊಂದು ಖರ್ಚು?!

ಸೋಮವಾರ, 11 ಸೆಪ್ಟಂಬರ್ 2017 (09:36 IST)
ಹೈದರಾಬಾದ್: ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಇಮೇಜ್ ಯಾವ ಮಟ್ಟಕ್ಕೆ ಏರಿದೆ ಎನ್ನುವುದಕ್ಕೆ ಈ ಸುದ್ದಿಯೇ ಸಾಕ್ಷಿ. ಸಾಹೋ ಎಂಬ ಚಿತ್ರ ಮಾಡುತ್ತಿರುವ ಪ್ರಭಾಸ್ ಹೊಡೆದಾಟಕ್ಕೇ ಚಿತ್ರತಂಡ ಮಾಡುತ್ತಿರುವ ವೆಚ್ಚದ ವಿವರ ಕೇಳಿದರೆ ಬೆರಗಾಗುತ್ತೀರಿ.

 
ಸಾಹೋ ಚಿತ್ರದಲ್ಲಿ ಅದ್ಭುತ ಸ್ಟಂಟ್ ಗಳಿರುತ್ತವೆ ಎಂದು ಈಗಾಗಲೇ ಸುದ್ದಿ ಓಡಾಡುತ್ತಿದೆ. ಈ ಸ್ಟಂಟ್ ಗಳಿಗಾಗಿಯೇ ಚಿತ್ರತಂಡ ಬರೋಬ್ಬರಿ 25 ಕೋಟಿ ರೂ. ಖರ್ಚು ಮಾಡಲಿದೆಯಂತೆ.

ಚಿತ್ರದಲ್ಲಿ ಕೆಲವು ಅಂಟರ್ ವಾಟರ್ ಫೈಟಿಂಗ್ ಸೀನ್ ಗಳಿವೆಯಂತೆ. ಸಮುದ್ರಾಳದಲ್ಲಿಯೂ ಪ್ರಭಾಸ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಅದೇನೇ ಇದ್ದರೂ, 25 ಕೋಟಿ ರೂ. ಖರ್ಚು ಮಾಡುತ್ತಾರೆಂದರೆ, ಆ ಸ್ಟಂಟ್ ಸೀನ್ ಗಳನ್ನು ಎಷ್ಟು ಅದ್ಭುತವಾಗಿ ಮಾಡುತ್ತಿರಬಹುದು ನೀವೇ ಲೆಕ್ಕ ಹಾಕಿ.

ಇದನ್ನೂ ಓದಿ.. ಸರ್ಜಿಕಲ್ ಸ್ಟ್ರೈಕ್ ನಡೆದಾಗ ಸೈನಿಕರ ಸ್ಥಿತಿ ಹೇಗಿತ್ತು? ಮೇಜರ್ ಹೇಳಿದ್ದೇನು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ