ಬಿಗ್ ಬಾಸ್ ಗೆ ಚಾರ್ಲಿ ಯಾಕೆ ಹೋಗಿಲ್ಲ ಕಾರಣ ತಿಳಿಸಿದ ರಕ್ಷಿತ್ ಶೆಟ್ಟಿ

ಶನಿವಾರ, 25 ನವೆಂಬರ್ 2023 (08:40 IST)
ಬೆಂಗಳೂರು: ಈ ಬಾರಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಚಾರ್ಲಿ ನಾಯಿ ಬರುತ್ತೆ ಎಂದು ವೀಕ್ಷಕರು ಭಾರೀ ನಿರೀಕ್ಷೆಯಲ್ಲಿ ಕಾದಿದ್ದರು. ಆದರೆ ಚಾರ್ಲಿ ಬರಲೇ ಇಲ್ಲ.

ಕೆಲವು ದಿನಗಳ ನಂತರವಾದರೂ ಅನಿಮಲ್ ಬೋರ್ಡ್ ಒಪ್ಪಿಗೆ ಸಿಕ್ಕ ಮೇಲೆ ಚಾರ್ಲಿ ಮನೆಯೊಳಗೆ ಬರುತ್ತಾಳೆ ಎಂದು ಸುದ್ದಿಯಿತ್ತು. ಅದಾದ ಬಳಿಕ ಚಾರ್ಲಿ ಉತ್ತರ ಭಾರತಕ್ಕೆ ಹೋಗಿದ್ದಾಳೆ. ಬಂದ ಮೇಲೆ ಬರುತ್ತಾಳೆ ಎಂದಾಯ್ತು. ಆದರೆ ಇದುವರೆಗೆ ಚಾರ್ಲಿ ಬರಲೇ ಇಲ್ಲ. ಈಗ ವೀಕ್ಷಕರೂ ಆ ವಿಚಾರವನ್ನು ಮರೆತಿದ್ದಾರೆ.

ಇದೀಗ ನಟ ರಕ್ಷಿತ್ ಶೆಟ್ಟಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಚಾರ್ಲಿ ಬರದೇ ಇರಲು ನಿಜವಾದ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

‘ಚಾರ್ಲಿಯನ್ನು ಬಿಗ್ ಬಾಸ್ ಮನೆಗೆ ಎರಡು ದಿನಗಳ ಮಟ್ಟಿಗಾದರೂ ಕಳಿಸೋಣವೆಂದುಕೊಂಡಿದ್ದೆವು. ಆದರೆ ಚಾರ್ಲಿ ಬಿಗ್ ಬಾಸ್ ಗೆ ಹೋಗುತ್ತಾಳೆ ಎಂದು ತಿಳಿದ ಕೂಡಲೇ ನಮಗೆ ಕೆಲವು ಈಮೇಲ್ ಬರಲು ಶುರುವಾಯ್ತು. ಸಿನಿಮಾ ಮುಗಿದ ಮೇಲೆ ಅವಳನ್ನು ಎಲ್ಲೂ ಬಳಸಲ್ಲ ಎಂದಿದ್ದಿರಿ. ಈಗ ಯಾಕೆ ಬಳಸಿಕೊಳ್ಳುತ್ತಿದ್ದೀರಿ ಎಂದೆಲ್ಲಾ ಮೇಲ್ ಬರಲು ಶುರುವಾಯ್ತು. ಹೀಗಾಗಿ ನಮ್ಮಲ್ಲೇ ಚರ್ಚೆ ಮಾಡಿ ಕಳುಹಿಸದೇ ಇರಲು ತೀರ್ಮಾನಿಸಿದೆವು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ