BBK12: ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳು ಈಗೆಲ್ಲಿದ್ದಾರೆ
ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬಿಗ್ ಬಾಸ್ ಮನೆಗೆ ಬೀಗ ಹಾಕಿತ್ತು. ಹೀಗಾಗಿ ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಗಳನ್ನು ನಿನ್ನೆ ದಿಡೀರ್ ಸ್ಥಳಾಂತರಿಸಲಾಗಿತ್ತು.
ಬಿಗ್ ಬಾಸ್ ಸ್ಪರ್ಧಿಗಳನ್ನು ಒಟ್ಟಾಗಿ ಕಾರ್ ಗಳಲ್ಲಿ ಸ್ಥಳಾಂತರಿಸಲಾಗಿದೆ. ಇವರನ್ನು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಎಚ್ಚರಿಕೆ ವಹಿಸಲಾಗಿತ್ತು. ಹೀಗಾಗಿ ಬಿಗ್ ಬಾಸ್ ಶೋ ಮತ್ತೆ ಮುಂದುವರಿಸುವ ಸೂಚನೆಯಿದೆ. ಆದರೆ ಎಲ್ಲಿ ಎಂಬುದೇ ಪ್ರಶ್ನೆ.
ಸದ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿಯಿದೆ. ಸ್ಪರ್ಧಿಗಳು ಎಲ್ಲಿದ್ದಾರೆಂಬುದನ್ನು ಗೌಪ್ಯವಾಗಿಯೇ ಇಡಲಾಗಿದೆ. ಮುಂದೆ ಇನ್ನೊಂದು ಲೊಕೇಷನ್ ಸಿದ್ಧಪಡಿಸಿ ಅಲ್ಲಿ ಶೋ ಮುಂದುವರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.