ಬಿಗ್ ಬಾಸ್ ಕನ್ನಡ: ಧನುಶ್ರೀ ಮತ್ತೊಬ್ಬ ನಿವೇದಿತಾ ಗೌಡ ಆಗ್ತಾಳಾ?

ಬುಧವಾರ, 3 ಮಾರ್ಚ್ 2021 (09:09 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ಬಾರಿ ಮೊದಲ ದಿನದಿಂದಲೂ ಟ್ರೋಲ್ ಆದ ಸ್ಪರ್ಧಿ ಎಂದರೆ ಧನುಶ್ರೀ.


ಟಿಕ್ ಟಾಕ್ ಸ್ಟಾರ್ ಈಗ ಮತ್ತೊಬ್ಬ ನಿವೇದಿತಾ ಗೌಡ ಆಗುವ ಲಕ್ಷಣ ಕಾಣುತ್ತಿದೆ. ಬಿಗ್ ಬಾಸ್ ನಲ್ಲಿ ಈ ಹಿಂದೆ ಜನಪ್ರಿಯತೆ ಜೊತೆಗೆ ಹೆಚ್ಚು ಟ್ರೋಲ್ ಆಗಿದ್ದು ನಿವೇದಿತಾ ಗೌಡ. ಬೊಂಬೆಯಂತೆ ಮಾತನಾಡುವ ಹುಡುಗಿ ಈಗಲೂ ಟ್ರೋಲಿಗರ ಪಾಲಿಗೆ ಮೆಚ್ಚಿನ ತಾರೆ.

ಈಗ ಧನುಶ್ರೀ ಮೊದಲ ದಿನವೇ ಟ್ರೋಲ್ ಆಗಿ ಸುದ್ದಿಯಾಗುತ್ತಿದ್ದಾರೆ. ಮನೆಯೊಳಗೆ ಪ್ರವೇಶಿಸಿದ ತಕ್ಷಣ ಶುಭಾ ಪೂಂಜ ಚಿನ್ನಿ ಎಂದು ತಾವು ಮದುವೆಯಾಗಲಿರುವ ಹುಡುಗನ ಬಗ್ಗೆ ಹೇಳುತ್ತಾರೆ. ಆಗ ಧನುಶ್ರೀ ಚಿನ್ನಿ ಎಂದರೆ ಯಾರು ಎಂದು ಕೇಳುತ್ತಾರೆ. ಇದಕ್ಕೆ ಶುಭಾ ಪೂಂಜಾ ನನ್ನ ಫಿಯಾನ್ಸಿ ಎನ್ನುತ್ತಾರೆ.

ಆದರೆ ಫಿಯಾನ್ಸಿ ಎಂದಾಗ ಹಾಗಂದರೆ ಯಾರು ಎಂದು ಕೇಳುವ ಧನುಶ್ರೀಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಧಾರವಾಡದಲ್ಲಿ ಬೆಣ್ಣೆದೋಸೆ ಫೇಮಸ್ ಎಂದು ಹೇಳಿ ಮತ್ತಷ್ಟು ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಏನೇ ಆಗಲಿ, ಬಿಗ್ ಬಾಸ್ ನಲ್ಲಿ ಒಟ್ನಲ್ಲಿ ಸುದ್ದಿಯಲ್ಲಿದ್ದರೇ ಓಟ್ ಜಾಸ್ತಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ