ಬಿಗ್ ಬಾಸ್ ಗೆ ಸರ್ಪೈಸ್ ಎಂಟ್ರಿ ಕೊಟ್ಟವರು ಇವರೇ

ಸೋಮವಾರ, 1 ಮಾರ್ಚ್ 2021 (09:02 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಸೀಸನ್ ಗೆ ನಿನ್ನೆ ಸಂಜೆ ಚಾಲನೆ ಸಿಕ್ಕಿದೆ. ಈ ಬಾರಿ ಸ್ಪರ್ಧಿಗಳಾಗಿ ಹೋಗುತ್ತಾರೆಂದು ಈ ಮೊದಲು ಕೇಳಿಬರುತ್ತಿದ್ದ ಕೆಲವು ಹೆಸರುಗಳು ಸ್ಪರ್ಧಿಗಳಾಗಲೇ ಇಲ್ಲ. ಆದರೆ ಊಹಿಸದೇ ಇದ್ದವರೂ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಿದ್ದಾರೆ.


ಅವರಲ್ಲಿ ಪ್ರಮುಖ ಹೆಸರೆಂದರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಪ್ರಶಾಂತ್ ಸಂಬರಗಿ ದೊಡ್ಮನೆ ಪ್ರವೇಶಿಸುತ್ತಾರೆಂದು ಯಾರೂ ಊಹಿಸಿಯೂ ಇರಲಿಲ್ಲ. ಇನ್ನು, ಹಿರಿಯ ನಟ ಶಂಕರ್ ಅಶ್ವತ್ಥ್. ಅವರೂ ಊಹಿಸಿದ ಸ್ಪರ್ಧಿಗಳ ಲಿಸ್ಟ್ ನಲ್ಲಿಯೇ ಇರಲಿಲ್ಲ. ಹಿರಿಯ ನಟಿಯೊಬ್ಬರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಅದು ವಿನಯಾ ಪ್ರಸಾದ್ ಇರಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ವಿನಯಾ ಬಿಗ್ ಬಾಸ್ ಗೆ ಬಂದಿಲ್ಲ. ಬದಲಾಗಿ ಹಿರಿಯ ನಟಿ ಚಂದ್ರಕಲಾ ಮೋಹನ್ ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಉಳಿದಂತೆ ಗೀತಾ ಭಾರತಿ ಭಟ್, ವೈಷ್ಣವಿ ಗೌಡ ನಿರೀಕ್ಷೆಯಂತೇ ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಇನ್ನು, ನಟಿ ಸುಕೃತಾ ನಾಗ್, ರವಿಶಂಕರ್ ಗೌಡ ಹೆಸರು ಕೇಳಿಬರುತ್ತಿತ್ತು. ಇವರು ಯಾರೂ ಬಿಗ್ ಬಾಸ್ ಗೆ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ