ಕಾಮಿಡಿ ಕಿಲಾಡಿಗಳು ನಯನಾ ವಿವಾದ ಇದೇ ಮೊದಲಲ್ಲ!

ಮಂಗಳವಾರ, 22 ನವೆಂಬರ್ 2022 (09:20 IST)
ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದೆ ನಯನಾ ಹಣಕಾಸಿನ ವಿಚಾರದಲ್ಲಿ ಕಿತ್ತಾಟವಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮತ್ತೊಬ್ಬ ಕಲಾವಿದ ಸೋಮಶೇಖರ್ ಎಂಬವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಾಮಿಡಿ ಕಿಲಾಡಿಗಳು ಶೋನಿಂದ ಬಂದಿದ್ದ 3 ಲಕ್ಷ ರೂ. ಬಹುಮಾನ ಹಣ ಹಂಚಿಕೆ ವಿಚಾರದಲ್ಲಿ ಸೀನಿಯರ್ ಗಳಿಗೂ ಪಾಲು ಕೊಡಬೇಕು ಎಂದು ನಯನಾ ಪೊಲೀಸ್ ಠಾಣೆಯಲ್ಲೇ ಕುಳಿತು ವಾಯ್ಸ್ ಮೆಸೇಜ್ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಾಜರಾಜೇಶ್ವರಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಸೋಮಶೇಖರ್ ನಮಗೆ ರಕ್ಷಣೆ ಕೊಡಿ ಎಂದು ಕೋರಿದ್ದಾರೆ. ಆದರೆ ತಮ್ಮ ಮೇಲೆ ಬಂದಿರುವ ಆರೋಪಗಳನ್ನು ನಯನಾ ನಿರಾಕರಿಸಿದ್ದಾರೆ. ಬೇಕೆಂದೇ ನನ್ನನ್ನು ಸಿಕ್ಕಿಸಿ ಹಾಕಲು ಈ ರೀತಿ ಆರೋಪ ಮಾಡಲಾಗಿದೆ ಎಂದಿದ್ದಾರೆ.

ನಯನಾ ಈ ರೀತಿ ವಿವಾದಕ್ಕೀಡಾಗಿರುವುದು ಇದೇ ಮೊದಲಲ್ಲ. ಇದಕ್ಕೆ ಮೊದಲು ಕನ್ನಡದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ವಿವಾದಕ್ಕೀಡಾಗಿದ್ದರು. ಆಗ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದ ನಯನಾ ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ