ಈ ವಾರ ಬಿಗ್ ಬಾಸ್ ನಿಂದ ಹೊರಹೋಗುವವರು ಯಾರು?

ಭಾನುವಾರ, 28 ಮಾರ್ಚ್ 2021 (08:56 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಾಲ್ಕನೇ ವಾರದ ಅಂತ್ಯಕ್ಕೆ ಮತ್ತೆ ಸ್ಪರ್ಧಿಗಳ ಮೇಲೆ ಎಲಿಮಿನೇಷನ್ ಕತ್ತಿ ತೂಗಾಡುತ್ತಿದೆ.


ಈ ವಾರ ಮನೆಯಿಂದ ಹೊರಹೋಗಲು ಚಂದ್ರಕಲಾ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಮಂಜು, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ರಘು, ರಾಜೀವ್, ಸಮಂತ್, ಶಂಕರ್, ಶುಭಾ ಪೂಂಜಾ, ವೈಷ್ಣವಿ, ವಿಶ್ವನಾಥ್ ನಾಮಿನೇಟ್ ಆಗಿದ್ದರು. ಈ ಪೈಕಿ ಯಾರು ಹೊರಹೋಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.

ಈ ಪೈಕಿ ರಾಜೀವ್, ಸಮಂತ್, ವೃಷ್ಣವಿ, ದಿವ್ಯಾ ಉರುಡುಗ ಈಗಾಗಲೇ ವೀಕ್ಷಕರ ಮನಗೆದ್ದಿದ್ದಾರೆ. ಹೀಗಾಗಿ ಇವರು ಉಳಿದುಕೊಳ್ಳುವ ಸಾ‍ಧ್ಯತೆಯೇ ಹೆಚ್ಚು. ಉಳಿದ ಸ್ಪರ್ಧಿಗಳ ಮೇಲೆ ತೂಗುಗತ್ತಿ ಇದ್ದು, ಇವರಲ್ಲಿ ಯಾರು ಉಳಿದುಕೊಳ್ಳುತ್ತಾರೆ, ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಪ್ರಶ್ನೆಗೆ ಇಂದು ಕಿಚ್ಚ ಸುದೀಪ್ ಶೋನಲ್ಲಿ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ