ಬೆಂಗಳೂರು: ಸ್ವಾಭಿಮಾನ ಬಿಟ್ಟು ಗೌತಮಿ ಜತೆ ಕ್ಯಾಪ್ಟನ್ಸಿ ಟಾಸ್ಕ್ ಆಟವಾಡಲ್ಲ ಎಂದು ಬಿಟ್ಟುಕೊಟ್ಟ ಮೋಕ್ಷಿತಾ ಇದೀಗ ಭಾರೀ ಮುಖಭಂಗವಾಗಿದೆ. ಗೌತಮಿ ಅವರು ಧನರಾಜ್ ಜತೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೆಲೆಕ್ಟ್ ಆಗಿ ಕೊನೆಯಲ್ಲಿ ಕ್ಯಾಪ್ಟನ್ಸಿಗಾಗಿ ಶಿಶಿರ್ ಜತೆ ನಡೆದ ಸ್ಪರ್ಧೆಯಲ್ಲಿ ಗೆದ್ದು, ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಇಂದು ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಗೌತಮಿ ಉತ್ತಮ ಪ್ರದರ್ಶನ ನೀಡಿ, ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಮನೆಮಂದಿಯೆಲ್ಲ ಶುಭಕೋರಿದ್ದಾರೆ. ಚೈತ್ರಾ ಅವರು ಒಂದು ಆಟ ಎಷ್ಟು ಪಾಠ ಕಲಿಸುತ್ತಾಲ್ವ ಎಂದಿದ್ದಾರೆ. ಅಲ್ಲದೆ ಗೌತಮಿ ಖುಷಿಯಾಗಿ ಕ್ಯಾಪ್ಟನ್ ರೂಮ್ ಪ್ರವೇಶ ಮಾಡಿದ್ದು, ಬಂದ ದಾರಿಯನ್ನು ಯಾವತ್ತೂ ಮರೆಯಬಾರದು ಎಂದಿದ್ದಾರೆ.
ಮತ್ತೊಂದೆಡೆ ಮೋಕ್ಷಿತಾ, ಇದನೆಲ್ಲಾ ನಾನು ಕ್ಯಾರೇ ಅನ್ನಲ್ಲ ಎಂದಿದ್ದಾರೆ. ಇಂದಿನ ಸಂಚಿಕೆ ನೋಡುಗರಿಗೆ ಭಾರೀ ಕುತೂಹಲವನ್ನು ಹೆಚ್ಚಿಸಿದೆ.
ಹೌದು... ಬಿಗ್‌ಬಾಸ್ ಮನೆಯಲ್ಲಿ ಉಗ್ರಂ ಮಂಜು, ಗೌತಮಿ ಹಾಗೂ ಮೋಕ್ಷಿತಾ ಒಂದೇ ಟೀಂ ಅಂತ ಹೇಳಲಾಗುತ್ತಿತ್ತು. ಆದರೆ ಮಹಾರಾಜ ಟಾಸ್ಕ್ ವೇಳೆ ಮಂಜು ಹಾಗೂ ಗೌತಮಿ ವಿರುದ್ಧ ಮೋಕ್ಷಿತಾ ಕೋಪ ಮಾಡಿಕೊಂಡಿದ್ದರು. ಆ ಕೋಪದಿಂದಲೇ ಗುಂಪುಗಾರಿಕೆಯಿಂದ ಹೊರಬಂದ ಮೋಕ್ಷಿತಾ ಕ್ಯಾಪ್ಟನ್ಸ್ ಟಾಸ್ಕ್ ಅನ್ನು ಆಡಲು ಗೌತಮಿ ಸಹಾಯವನ್ನು ಕೇಳಲ್ಲ ಎಂದು ಪಟ್ಟು ಹಿಡಿದಿದ್ದರು.
ಇದರಿಂದ ಬಿಗ್‌ಬಾಸ್ ಮೋಕ್ಷಿತಾಗೆ ದೊಡ್ಡ ತಲೆದಂಡವೇ ನೀಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಸಹ ನೀಡಿದ್ದರು. ಆದರೂ ಕೂಡ ಮೋಕ್ಷಿತಾ ಗೌತಮಿಯೊಂದಿಗೆ ಆಡುವ ಮನಸ್ಸು ಮಾಡಲಿಲ್ಲ. ಹೀಗಾಗಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದಲೇ ಹೊರಗುಳಿದ ಮೋಕ್ಷಿತಾಳನ್ನು ಬಿಟ್ಟು ಗೌತಮಿಗೆ ಕ್ಯಾಪ್ಟನ್ ಟಾಸ್ಕ್ ಆಡಲು ಅವಕಾಶ ನೀಡಲಾಗುತ್ತದೆ.