ಉಪೇಂದ್ರರಿಗೆ ಈ ರೀತಿ ಬರ್ತ್ ಡೇ ವಿಶ್ ಮಾಡಿ ಕನ್ನಡಿಗರ ಮನಗೆದ್ದ ತೆಲುಗು ಹಾಸ್ಯ ನಟ

ಭಾನುವಾರ, 20 ಸೆಪ್ಟಂಬರ್ 2020 (11:40 IST)
ಹೈದರಾಬಾದ್ : ಕನ್ನಡದ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡುವುದರ ಮೂಲಕ ತೆಲುಗಿನ ಹಾಸ್ಯ ನಟ ಸಂಪೂರ್ಣೇಶ್ ಬಾಬು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ಸೆ.18ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದ  ತೆಲುಗಿನ ಹಾಸ್ಯ ನಟ ಸಂಪೂರ್ಣೇಶ್ ಬಾಬು ಅವರು ನಟ ಉಪೇಂದ್ರ ಅವರಿಗೆ ಕನ್ನಡದಲ್ಲಿ ವಿಶ್ ಮಾಡಿದ್ದಾರೆ.

ಅಲ್ಲದೇ ತಾವು ನಟನಾಗಿ ಹೆಸರು ಮಾಡೋಕೆ ಉಪೇಂದ್ರ ಅವರೇ ಸ್ಪೂರ್ತಿ ಎಂದು ಕನ್ನಡದಲ್ಲೇ ತಿಳಿಸಿದ್ದಾರೆ. ಕನ್ನಡಿಗರೇ ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಬಳಸುತ್ತಿರುವಾಗ ತೆಲುಗು ನಟ ಕನ್ನಡದಲ್ಲಿ ವಿಶ್ ಮಾಡಿದ್ದಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ