ಸಿನಿಮಾದಲ್ಲಿ ಮೂಡಿಬರಲಿದೆ ವಿವಾದಾತ್ಮಕ ನಿರ್ದೇಶಕ ಆರ್ ಜಿವಿ ಬಯೋಪಿಕ್

ಶುಕ್ರವಾರ, 18 ಸೆಪ್ಟಂಬರ್ 2020 (10:22 IST)
ಹೈದರಾಬಾದ್ : ಇಷ್ಟು ದಿನ ಬೇರೆಯವರ ಜೀವನಕಥೆಗಳನ್ನು ಸಿನಿಮಾ ಮಾಡುತ್ತಿದ್ದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇದೀಗ ತಮ್ಮ ಜೀವನಕಥೆಯನ್ನು ಸಿನಿಮಾ ಮಾಡಲು ಹೋರಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ರಾಮ್ ಗೋಪಾಲ್ ವರ್ಮಾ ಅವರ ಜೀವನಕಥೆ ಆಧಾರಿತ ಚಿತ್ರಕ್ಕೆ “ರಾಮು” ಎಂದು ಟೈಟಲ್ ಇಟ್ಟಿದ್ದು, ಈ ಸಿನಿಮಾ ಸೆಪ್ಟೆಂಬರ್ 16ರಂದು ಸೆಟ್ಟೇರಿದೆ. ವರ್ಮಾ ಅವರ ತಾಯಿ ಸೂರ್ಯವತಿ ಚಿತ್ರಕ್ಕೆ ಆಶೀರ್ವಾದ ಮಾಡಿದ್ದು, ಸಹೋದರಿ  ವಿಜಯ ಕ್ಲಾಪ್ ಮಾಡಿದ್ದಾರೆ.

ಆದರೆ ತಮ್ಮ ಸಿನಿಮಾವನ್ನು ವರ್ಮಾ ಅವರು ನಿರ್ದೇಶನ, ನಿರ್ಮಾಣ ಮಾಡುತ್ತಿಲ್ಲ ಬದಲಾಗಿ ಬೊಮ್ಮಕು ಮುರಳಿ ನಿರ್ಮಿಸುತ್ತಿದ್ದು, ವರ್ಮಾ ಪಾತ್ರದಲ್ಲಿ ನಟಿಸುತ್ತಿರುವ ದೊರಸಾಯಿ ತೇಜ ಅವರೇ ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ವರ್ಮಾ ಅವರ ಕಾಲೇಜು ಜೀವನದ ಬಗ್ಗೆ ನಡೆಯಲಿದ್ದು, ಮೂರು ಭಾಗಗಳಾಗಿ ಮೂಡಿಬರಲಿದೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ