ರಜನೀಕಾಂತ್ ಯಾರೆಂದು ನನಗೆ ತಿಳಿದಿಲ್ಲ ಎಂದ ಬಾಲಿವುಡ್ ನಟ

ಸೋಮವಾರ, 27 ಜುಲೈ 2020 (13:39 IST)
ಚೆನ್ನೈ : ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ತಮಿಳಿನ ಖ್ಯಾತ ನಟ ಸೂಪರ್ ಸ್ಟಾರ್ ರಜನೀಕಾಂತ್ ಅವರ ಪರಿಚಯ ತಮಗಿಲ್ಲ ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಹೇಳಿದ್ದಾರೆ.

ಹೌದು. ದಕ್ಷಿಣ ಭಾರತದ ಖ್ಯಾತ ನಟರಾದ ರಜನೀಕಾಂತ್ ಅವರ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಕಾಲಿವುಡ್ ನಲ್ಲಿ ಮಾತ್ರವಲ್ಲ, ಹಲವು ಚಿತ್ರರಂಗದಲ್ಲಿಯೂ ಖ್ಯಾತಿ ಗಳಿಸಿವೆ. ಅಂತಹದರಲ್ಲಿ ನಟ ಸೈಫ್ ಅಲಿ ಖಾನ್ ರಜನೀಕಾಂತ್ ಯಾರು ಅಂತಾನೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅಂದ ಮಾತ್ರಕ್ಕೆ ಅವರ ಅಭಿಮಾನಿಗಳು ಶಾಕ್ ಆಗುವ ಅಗತ್ಯವಿಲ್ಲ. ಯಾಕೆಂದರೆ ಸೈಫ್ ಅಲಿ ಖಾನ್ ಹೀಗೆ ಹೇಳಿದ್ದು, ಶುಕ್ರವಾರ ತೆರೆಕಂಡ ಸುಶಾಂತ್ ಸಿಂಗ್ ರಜಪೂತ್ ‘ದಿಲ್ ಬೇಚಾರ್’ ಸಿನಿಮಾದಲ್ಲಿ. ಇದರಲ್ಲಿ ಸುಶಾಂತ್ ಸಿಂಗ್ ನಟ ರಜನೀಕಾಂತ್ ಅವರ ಫ್ಯಾನ್ ಆಗಿದ್ದು, ದೃಶ್ಯವೊಂದರಲ್ಲಿ ಸೈಫ್ ಅಲಿ ಖಾನ್ ಜೊತೆ ಮಾತನಾಡುವಾಗ ನಿಮಗೆ ರಜನೀಕಾಂತ್ ಗೊತ್ತೆ ಎಂದು ಕೇಳಿದ್ದಕ್ಕೆ ಅವರು ಯಾರು ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಬಳಿಕ ನಕ್ಕು ರಜನೀಕಾಂತ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಂದು ಹೇಳಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ