ಆಸ್ಪತ್ರೆಗೆ ದಾಖಲಾಗದೆ ಕೇವಲ ಒಂದೇ ವಾರದಲ್ಲಿ ಕೊರೊನಾದಿಂದ ಗುಣಮುಖರಾದ ನಟ ವಿಶಾಲ್. ಹೇಗೆ ಗೊತ್ತಾ?

ಸೋಮವಾರ, 27 ಜುಲೈ 2020 (12:53 IST)
Normal 0 false false false EN-US X-NONE X-NONE

ಚೆನ್ನೈ : ತಮಿಳಿನ ಖ್ಯಾತ ನಟ ವಿಶಾಲ್ ಆಸ್ಪತ್ರೆಗೆ ದಾಖಲಾಗದೆ ಒಂದೇ ವಾರದಲ್ಲಿ ಮಹಾಮಾರಿ ಕೊರೊನಾದಿಂದ ಗುಣಮುಖರಾಗಿದ್ದಾರಂತೆ.

ನಟ ವಿಶಾಲ್ ಮತ್ತು ಅವರ ತಂದೆ ಜಿ.ಕೆ.ರೆಡ್ಡಿ, ಮ್ಯಾನೇಜರ್ ಗೆ ಕೊರೊನಾ ಸೋಂಕು ತಗುಲಿತ್ತು. ವಿಶಾಲ್ ವಿಪರೀತ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದರಂತೆ. ಆದರೆ ಅವರು ಆಸ್ಪತ್ರೆಗೆ ದಾಖಲಾಗದೆ ವೈದ್ಯರ ಸಲಹೆಮೇರೆಗೆ ಮನೆಯಲ್ಲಿಯೇ ಇದ್ದು, ಆಯುರ್ವೇಧ ಔಷಧಗಳನ್ನು ತೆಗೆದುಕೊಂಡು ಒಂದು ವಾರದಲ್ಲಿಯೇ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ವಿಶಾಲ್, ನಾನು ಮತ್ತು ತಂದೆ ಹಾಗೂ ನಮ್ಮ ಮ್ಯಾನೇಜರ್ ಗೆ ಕೊರೊನಾ ಪಾಸಿಟಿವ್ ಬಂದಿತ್ತು. ನಾವೆಲ್ಲರೂ ಆಯುರ್ವೇಧ ಔಷಧಗಳನ್ನು ತೆಗೆದುಕೊಂಡಿದ್ದು, ಕೇವಲ ಒಂದೇ ವಾರದಲ್ಲಿ ನಾವು ಮೂವರು ಗುಣಮುಖರಾಗಿದ್ದೆವೆ. ಎಂದು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ