ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಡರಾತ್ರಿ ಹೋಗಿದ್ದು ಯಾರ ಹತ್ತಿರ?

ಶನಿವಾರ, 26 ಸೆಪ್ಟಂಬರ್ 2020 (22:01 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನ ಡ್ರಗ್ ಲಿಂಕ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಪ್ರಮುಖವಾಗಿ ಕೇಳಿಬಂದಿದ್ದು, ಎನ್ ಸಿ ಬಿ ವಿಚಾರಣೆಯನ್ನೂ ಎದುರಿಸಿದ್ದಾರೆ.

ಎನ್ ಸಿ ಬಿ ವಿಚಾರಣೆಗೆ ಹಾಜರಾಗುವ ಮುಂಚಿತವಾಗಿ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಮುಂಬಯಿಯ ಉನ್ನತ ವಕೀಲರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ನಟಿ ದೀಪಿಕಾ ಪಡುಕೋಣೆ ಅವರು ಮಾದಕ ದ್ರವ್ಯ ಚಾಟ್‌ಗಳಲ್ಲಿ ಭಾಗಿಯಾಗಿರುವ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಡೆಸಿದ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ.

ವಿಚಾರಣೆಗೆ ಹಾಜರಾಗುವ ಮೊದಲು, ನಟಿ ದೀಪಿಕಾ ಮತ್ತು ರಣವೀರ್ ಸಿಂಗ್ ಕಳೆದ ರಾತ್ರಿ ಮುಂಬೈನ ಉನ್ನತ ವಕೀಲರನ್ನು ಪಂಚತಾರಾ ಹೋಟೆಲ್ ನಲ್ಲಿ ಭೇಟಿಯಾಗಿದ್ದಾರೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.

ದೀಪಿಕಾ ಮತ್ತು ರಣವೀರ್ ಅವರು ತಡರಾತ್ರಿ 12 ವಕೀಲರ ತಂಡವನ್ನು ಭೇಟಿಯಾಗಿ ಕಾನೂನು ಅಭಿಪ್ರಾಯ ಪಡೆದುಕೊಂಡರು ಎನ್ನಲಾಗಿದ್ದು, ಬಾಲಿವುಡ್ ನ ಈ ದಂಪತಿ, ಮುಂಬೈನ ಉನ್ನತ ಕ್ರಿಮಿನಲ್ ವಕೀಲರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ