ಪ್ರಧಾನಿ ನರೇಂದ್ರ ಮೋದಿ ಅಂಗಳಕ್ಕೆ ನಟ ಸುಶಾಂತ್ ಸಿಂಗ್ ಸಾವಿನ ಕೇಸ್?

ಶನಿವಾರ, 26 ಸೆಪ್ಟಂಬರ್ 2020 (21:51 IST)
ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.

ಈ ನಡುವೆ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನಲ್ಲಿ ನ್ಯಾಯ ಕೊಡಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲಾಗಿದೆ.

ನಟ ಸುಶಾಂತ್ ಸಿಂಗ್ ನ ಸ್ನೇಹಿತರಾದ ಸ್ಮಿತಾ ಪಾರಿಖ್ ಮತ್ತು ನಿಲೋತ್ಪಾಲ್ ಮೃಣಾಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.

ನಟನ ಸಾವಿನ ಕೇಸ್ ತನಿಖೆಯನ್ನು ಸಿಬಿಐ ವಹಿಸಿಕೊಂಡು ಹಲವಾರು ವಾರಗಳೇ ಕಳೆದಿವೆ. ಆದರೆ ಇನ್ನೂ ಯಾವುದೇ ಪ್ರಗತಿ ಬಂದಿಲ್ಲ. ಹೀಗಾಗಿ ಸುಶಾಂತ ಸಿಂಗ್ ಸಾವಿಗೆ ನ್ಯಾಯ ಕೊಡಿಸುವಂತೆ ಪಿಎಂ ಮೋದಿಯವರನ್ನು ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ