ಬಾಲಿವುಡ್ ಈ ನಟಿಯರು ಡ್ರಗ್ಸ್ ಸೇವಿಸುತ್ತಾರಾ?

ಶನಿವಾರ, 26 ಸೆಪ್ಟಂಬರ್ 2020 (21:42 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಎನ್ ಸಿ ಬಿ ತನಿಖೆ ಚುರುಕುಗೊಳಿಸಿದೆ.

ಡ್ರಗ್ ಲಿಂಕ್ ಗೆ ಸಂಬಂಧಿಸಿದಂತೆ ಎನ್‌ಸಿಬಿ ವಿಚಾರಣೆ ನಡೆಸಿದ ವೇಳೆ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ತಾವು ಡ್ರಗ್ಸ್ ಸೇವಿಸುವುದನ್ನು ನಿರಾಕರಿಸಿದ್ದಾರೆ.

ಎನ್ ಸಿ ಬಿ ಅಧಿಕಾರಿಗಳ ವಿಚಾರಣೆ ವೇಳೆ ನಟಿ ದೀಪಿಕಾ ಪಡುಕೋಣೆ ತನ್ನ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರೊಂದಿಗೆ ಡ್ರಗ್ಸ್ ಚಾಟ್ ಮಾಡಿದ್ದಾಗಿ ಒಪ್ಪಿಕೊಂಡಿದ್ದರೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರು ಡ್ರಗ್ಸ್ ಸೇವಿಸುವುದನ್ನು ನಿರಾಕರಿಸಿದ್ದಾರೆ.

ಸಾರಾ ಮತ್ತು ಶ್ರದ್ಧಾ ಎಲ್ಲಾ ಡ್ರಗ್ಸ್ ಆರೋಪಗಳನ್ನು ನಿರಾಕರಿಸಿದ್ದು, ಯಾವುದೇ ಡ್ರಗ್ಸ್ ಸೇವಿಸಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ