ಬಾಲಿವುಡ್ ನಟಿಯಿಂದ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಮೊರೆ

ಶನಿವಾರ, 26 ಸೆಪ್ಟಂಬರ್ 2020 (21:23 IST)
ತಮ್ಮ ವಿರುದ್ಧ ನಿರ್ಮಾಪಕ ಅನುರಾಗ್ ಕಶ್ಯಪ್ ಆ ಥರದ ಕಿರುಕುಳ, ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಪಾಯಲ್ ಘೋಷ್ ಕೇಸ್ ದಾಖಲು ಮಾಡಿದ್ದಾರೆ.

ಈ ನಡುವೆ ಪಾಯಲ್ ಘೋಷ್ ಅವರನ್ನು ಪೊಲೀಸರು 'ಪ್ರಶ್ನಿಸಿದ್ದಾರೆ'. ತಪ್ಪಿತಸ್ಥರು ಮನೆಯಲ್ಲಿ ತಣ್ಣಗಾಗಿ ಕುಳಿತಿದ್ದು, ನನ್ನನ್ನು ಸುಡಲಾಗುತ್ತಿದೆ ಎಂದು ನಟಿ ಅಸಮಧಾನ ಹೊರಹಾಕಿದ್ದಾರೆ.

ಬಲವಂತವಾಗಿ ದೌರ್ಜನ್ಯ ಮಾಡಿರುವ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಪಾಯಲ್ ಘೋಷ್ ಅವರನ್ನು ಇತ್ತೀಚೆಗೆ ವರ್ಸೋವಾ ಪೊಲೀಸರು ವಿಚಾರಣೆ ನಡೆಸಿದ್ದು, ಕೂಪರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಯಿತು ಎಂದು ಹೇಳಿದ್ದಾರೆ.

'ಪಟೇಲ್ ಕಿ ಪಂಜಾಬಿ ಶಾದಿ' ನಟಿ ಈಗ ಪಿಎಂ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರಿಗೆ ನ್ಯಾಯಕ್ಕಾಗಿ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ.

ಎಫ್ ಐ ಆರ್ ದಾಖಲಾಗಿದ್ದರೂ ನಿರ್ಮಾಪಕ ಅನುರಾಗ್ ಕಶ್ಯಪ್ ರನ್ನು ಬಂಧಿಸಲಾಗಿಲ್ಲ ಎನ್ನೋದು ನಟಿಯ ಮತ್ತೊಂದು ಆರೋಪವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ