ನಟ ಸುಶಾಂತ್ ಸಿಂಗ್ ಜೊತೆಗಿನ ಅಫೇರ್ ಒಪ್ಪಿಕೊಂಡ ನಟಿ ಸಾರಾ ಅಲಿಖಾನ್
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ಇದೀಗ ಘಟನಾನುಘಟಿಗಳ ಡ್ರಗ್ ಲಿಂಕ್ ಬಿಚ್ಚಿಟ್ಟಿದೆ.
ನಟಿ ಸಾರಾ ಅಲಿ ಖಾನ್ ಅವರು ಕೆಲಕಾಲ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಸಂಬಂಧ ಹೊಂದಿದ್ದಾಗಿ ಎನ್ ಸಿ ಬಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನಲಾಗಿದ್ದು, ಆದರೆ ಡ್ರಗ್ಸ್ ಮಾಡುವುದನ್ನು ನಿರಾಕರಿಸಿದ್ದಾರೆ.
2018 ರಲ್ಲಿ ಅವರು ನಟಿ ಸಾರಾ, ನಟ ಸುಶಾಂತ್ ಒಟ್ಟಿಗೆ ಶೂಟಿಂಗ್ ಮಾಡುವಾಗ ಅವರ ಸ್ನೇಹ ಬೆಳೆಯಿತು ಎಂದು ನಟಿ ಹೇಳಿದ್ದಾರೆ. ಫೆಬ್ರವರಿ 2018 ರಿಂದ ಅವರು ಸ್ನೇಹಿತರಾಗಿದ್ದರಿಂದ ಸಂಬಂಧವು ಪ್ರಾರಂಭವಾಯಿತು ಎಂದಿದ್ದು, ಡಿಸೆಂಬರ್ 2018 ರಲ್ಲಿ ಸುಶಾಂತ್ ಸಿಂಗ್ ಜೊತೆಗೆ ಇರಲು ಹೋಗಿದ್ದಾಗಿ ತಿಳಿಸಿದ್ದಾರೆ.