ಚೀನಾ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಹೋರಾಟ

ಶುಕ್ರವಾರ, 18 ಸೆಪ್ಟಂಬರ್ 2020 (17:59 IST)
ನಾಲ್ಕೈದು ಜನರನ್ನು ಕರೆದುಕೊಂಡು ನೀವು ಚೀನಾದೊಂದಿಗೆ ಹೋರಾಟ ಮಾಡಬೇಕು. ಹೀಗಂತ ಬಾಲಿವಡ್ ನಟಿಗೆ ಹೇಳಲಾಗಿದೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅನುರಾಗ್ ಕಶ್ಯಪ್ ಅವರ ಟ್ವೀಟ್ ವಾರ್ ವೈರಲ್ ಆಗಿದೆ.
ಚೀನಾ ವಿರುದ್ಧ ಹೋರಾಡುವಂತೆ ನಟಿ ಕಂಗನಾಗೆ ಅನುರಾಗ್ ಕಶ್ಯಪ್ ವ್ಯಂಗ್ಯವಾಗಿ  ಕೇಳಿಕೊಂಡಿದ್ದಾರೆ.

"ನೀವು ಒಬ್ಬರೇ, ಸಹೋದರಿ - ಒಬ್ಬ ನಿಜವಾದ ಮಣಿಕರ್ಣಿಕಾ. ನಿಮ್ಮೊಂದಿಗೆ ನಾಲ್ಕು ಅಥವಾ ಐದು ಜನರನ್ನು ಕರೆದುಕೊಂಡು ಹೋಗಿ ಚೀನಾ ವಿರುದ್ಧ ಹೋರಾಡಿ. ಅವರು ನಮ್ಮ ಪ್ರದೇಶದೊಳಗೆ ಎಷ್ಟು ದೂರಕ್ಕೆ ಬಂದಿದ್ದಾರೆಂದು ನೋಡಿ. ನಮ್ಮನ್ನು ರಕ್ಷಿಸಲು ನೀವು ಇರುವವರೆಗೂ ಭಾರತವು ಚಿಂತಿಸಬೇಕಾಗಿಲ್ಲ ಎಂದು ಅವರಿಗೆ ತೋರಿಸಿ. LAC ನಿಮ್ಮ ಮನೆಯಿಂದ ಕೇವಲ ಒಂದು ದಿನದ ಪ್ರಯಾಣವಾಗಿದೆ. ಹೋಗಿ, ನಮ್ಮ ಹುಲಿ. ಜೈ ಹಿಂದ್. ” ಅನುರಾಗ್ ಅವರು ನಟಿ ಕಂಗನಾ ರಣಾವತ್ ಕುರಿತು ವ್ಯಂಗ್ಯವಾಗಿ ಟ್ವಿಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ