777 ಚಾರ್ಲಿ ಮೆಚ್ಚಿದ ಬಾಲಿವುಡ್ ನ ಬೋನಿ ಕಪೂರ್, ಮಧುರ್ ಭಂಡಾರ್ಕರ್

ಬುಧವಾರ, 15 ಜೂನ್ 2022 (09:40 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ನಿರ್ಮಿಸಿ, ನಟಿಸಿರುವ 777 ಚಾರ್ಲಿ ಸಿನಿಮಾಗೆ ಬಾಲಿವುಡ್ ನಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್, ನಿರ್ದೇಶಕ ಮಧುರ್ ಭಂಡಾರ್ಕರ್ ಚಾರ್ಲಿ ಸಿನಿಮಾ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಇಬ್ಬರೂ ಸಿನಿಮಾ ಕಂಟೆಂಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಂದಿಯಲ್ಲೂ ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಒಬ್ಬ ನಾಯಕ ನಟ ನಾಯಿ ಜೊತೆಗೆ ಪಾತ್ರವಹಿಸಿರುವ ವಿಶೇಷ ಸಿನಿಮಾ ಬಗ್ಗೆ ಘಟಾನುಘಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಾರ್ಲಿ ಈಗ ಥಿಯೇಟರ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ರಕ್ಷಿತ್ ಈ ಸಿನಿಮಾ ಮೂಲಕ ಗೆದ್ದಿದ್ದಾರೆ ಎಂದೇ ಹೇಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ