ಡಿ ಬಾಸ್ ಜೊತೆಗೆ ಮೇಘಾ ಶೆಟ್ಟಿ! ಏನಿದು ಹೊಸ ಸಮಾಚಾರ?

ಬುಧವಾರ, 23 ಮಾರ್ಚ್ 2022 (10:00 IST)
Photo Courtesy: Twitter
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಮೂಲಕ ಖ್ಯಾತಿ ಗಳಿಸಿ ಈಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿರುವ ನಟಿ ಮೇಘಾ ಶೆಟ್ಟಿ ಡಿ ಬಾಸ್ ದರ್ಶನ್ ಜೊತೆಗಿರುವ ಫೋಟೋಗಳು ಈಗ ವೈರಲ್ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಫೋಟೋಗಳನ್ನು ಸ್ವತಃ ಮೇಘಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಹಾಗಿದ್ದರೆ ಮೇಘಾ, ಡಿ ಬಾಸ್ ಭೇಟಿಯಾಗಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲಿದೆ.

ಮೇಘಾಗೆ ಸ್ಯಾಂಡಲ್ ವುಡ್ ನಲ್ಲಿ ಮೆಚ್ಚಿನ ನಟ ಎಂದರೆ ದರ್ಶನ್. ಹಲವು ಬಾರಿ ಮೇಘಾ ಇದನ್ನು ಹೇಳಿಕೊಂಡಿದ್ದರು. ಇದೇ ಅಭಿಮಾನದಿಂದ ಈಗ ದರ್ಶನ್ ಅವರನ್ನು ಕ್ರಾಂತಿ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಸದ್ಯಕ್ಕೆ ತಮ್ಮ ಚಾರ್ಮ್ ನಿಂದ ಸಿನಿಮಾದಲ್ಲೂ ಒಳ್ಳೆ ಬೇಡಿಯಲ್ಲಿರುವ ನಟಿ ಮೇಘಾ ಮುಂದೊಂದು ದಿನ ಡಿ ಬಾಸ್ ಸಿನಿಮಾದಲ್ಲೇ ನಟಿಸಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ