ದರ್ಶನ್ ಭೇಟಿ ಮಾಡಲು ಈಗ ಈ ಇಬ್ಬರ ಪರ್ಮಿಷನ್ ಬೇಕು: ಪತ್ನಿ ವಿಜಯಲಕ್ಷ್ಮಿ ಕೈಯಲ್ಲಿ ಕಂಟ್ರೋಲ್

Krishnaveni K

ಮಂಗಳವಾರ, 4 ಮಾರ್ಚ್ 2025 (12:19 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಕ್ಕೆ ಸಿಲುಕಿ ಜೈಲಿಗೆ ಹೋಗಿ ಬಂದ ಮೇಲೆ ನಟ ದರ್ಶನ್ ಜೀವನಶೈಲಿ ಸಂಪೂರ್ಣ ಬದಲಾಗಿದೆ. ಅವರನ್ನು ಈಗ ಯಾರೇ ಭೇಟಿಯಾಗಬೇಕಾದರೂ ಈ ಇಬ್ಬರ ಅನುಮತಿ ಬೇಕು. ಪತ್ನಿ ವಿಜಯಲಕ್ಷ್ಮಿ ಕೈಯಲ್ಲಿ ಕಂಟ್ರೋಲ್ ಇದೆ ಎನ್ನಲಾಗುತ್ತಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ದರ್ಶನ್ ಸಾಕಷ್ಟು ಪಾಠ ಕಲಿತಿದ್ದಾರೆ. ಇಷ್ಟು ದಿನವೂ ಅವರ ಸುತ್ತ ಕುಟುಂಬದವರಿಗಿಂತ ಬೆಂಬಲಿಗರೇ ಓಡಾಡಿಕೊಂಡಿದ್ದರು. ಪತ್ನಿ ವಿಜಯಲಕ್ಷ್ಮಿ ಕೂಡಾ ದೂರವೇ ಇದ್ದರು.

ಆದರೆ ದರ್ಶನ್ ಜೈಲಿಗೆ ಹೋದ ಬಳಿಕ ಅವರನ್ನು ಬಿಡಿಸಿಕೊಂಡು ಬರುವಲ್ಲಿ ವಿಜಯಲಕ್ಷ್ಮಿ ಪಾತ್ರ ದೊಡ್ಡದು. ಮೈದುನ ದಿನಕರ್ ಜೊತೆಗೂಡಿ ವಿಜಯಲಕ್ಷ್ಮಿ ಕಷ್ಟಪಟ್ಟು ಗಂಡನಿಗೆ ಜಾಮೀನು ಕೊಡಿಸಿ ಹೊರಗೆ ಕರೆತಂದಿದ್ದಾರೆ.

ಈ ಪ್ರಕರಣದ ಬಳಿಕ ದರ್ಶನ್ ಹೆಚ್ಚು ತಮ್ಮ ಪತ್ನಿ, ಮಗ, ತಾಯಿ, ಸಹೋದರ ಎಂದು ಕುಟುಂಬದ ಜೊತೆಗೇ ಕಾಲ ಕಳೆಯುತ್ತಿದ್ದಾರೆ. ಇಷ್ಟು ದಿನ ಪತ್ನಿ ಜೊತೆ ಹೊರಗೆ ಸುತ್ತಾಡುವುದೇ ಅಪರೂಪ ಎಂಬಂತಿದ್ದ ದರ್ಶನ್ ಈಗ ಎಲ್ಲೇ ಹೋದರೂ ಪತ್ನಿ ವಿಜಯಲಕ್ಷ್ಮಿ ಜೊತೆಗಿರುತ್ತಾರೆ.

ಈಗ ದರ್ಶನ್ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಲು ಹೊರಟಿದ್ದಾರೆ. ಇಷ್ಟು ದಿನ ಅವರ ಮ್ಯಾನೇಜರ್ ಆಗಿದ್ದ ನಾಗರಾಜ್, ಡ್ರೈವರ್ ಲಕ್ಷ್ಮಣ್ ಗೆ ವಿಜಯಲಕ್ಷ್ಮಿ ಕೊಕ್ ನೀಡಿದ್ದಾರೆ. ಇಬ್ಬರನ್ನೂ ದರ್ಶನ್ ರಿಂದ ದೂರವೇ ಇಟ್ಟಿದ್ದಾರಂತೆ. ಇದೀಗ ದರ್ಶನ್ ವ್ಯವಹರಾವನ್ನೆಲ್ಲಾ ತಾವೇ ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ದಿನಕರ್ ಕೂಡಾ ಸಾಥ್ ನೀಡುತ್ತಿದ್ದಾರೆ. ಈಗ ದರ್ಶನ್ ರನ್ನು ಯಾರೇ ಭೇಟಿ ಮಾಡಬೇಕೆಂದಿದ್ದರೂ ವಿಜಯಲಕ್ಚ್ಮಿ ಇಲ್ಲವೇ ದಿನಕರ್ ಒಪ್ಪಿಗೆ ಪಡೆಯಬೇಕು. ಜೊತೆಗೆ ನಟ ಧನ್ವೀರ್ ಗೌಡ ಕೂಡಾ ದರ್ಶನ್ ಗೆ ಕಾವಲಾಗಿ ನಿಂತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ