ಅಣ್ಣನ ಸ್ಥಾನದಲ್ಲಿ ನಿಂತು ಚೈತ್ರಾಗೆ ಮದುವೆ ಮಾಡಿಸಿದ ರಜತ್‌, ಕಾಲಿಗೆ ಬಿದ್ದ ತಂಗಿಯ ಕಾಲೆಳೆದ ಅಣ್ಣ, Video Viral

Sampriya

ಶುಕ್ರವಾರ, 9 ಮೇ 2025 (16:03 IST)
Photo Credit X
ಕುಂದಾಪುರ: 12 ವರ್ಷಗಳಿಂದ ಪ್ರೀತಿಸುತ್ತಿದ್ದ  ಶ್ರೀಕಾಂತ್ ಕಶ್ಯಪ್ ಜತೆ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಇಂದು ಹಸೆಮಣೆ ಏರಿದರು.

ಹಿರಿಯಡ್ಕ ಮೂಲದವರಾದ ಶ್ರೀಕಾಂತ್ ಮತ್ತು ಚೈತ್ರಾ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರು. ಸ್ನೇಹ ಪ್ರೀತಿಯಾಗಿ ತಿರುಗಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತನ್ನ ಗೆಲುವು ಹಾಗೂ ಸೋಲಿನಲ್ಲಿ ಜತೆಯಾಗಿದ್ದ ಸ್ನೇಹಿತನ ಜತೆ ಮುಂದಿನ ಜೀವನವನ್ನು ಸಾಗಿಸಲು ನಿರ್ಧರಿಸಿದ್ದೇನೆ ಎಂದು ತಮ್ಮ ಹುಡುಗನನ್ನು ಚೈತ್ರಾ ಅವರು ಪರಿಚಯಿಸಿದ್ದರು.

ವಿವಾದಾತ್ಮಕವಾಗಿ  ಹೆಚ್ಚು ಗುರುತಿಸಿಕೊಂಡಿದ್ದ ಚೈತ್ರಾ ಅವರಿಗೆ ಬಿಗ್‌ಬಾಸ್‌ ಸೀಸನ್ 11 ಹೊಸ ಬದುಕನ್ನು ಕಟ್ಟಿಕೊಟ್ಟಿತು. ರಿಯಾಲಿಟಿ ಶೋ ಮೂಲಕ ಚೈತ್ರಾ ಅಪಾರ ಅಭಿಮಾನಿಗಳನ್ನು ಗಳಿಸಿದರು. ಅದಲ್ಲದೆ ಮನೆಯಲ್ಲಿನ ಕೆಲವರಿಗೆ ತುಂಬಾನೇ ಇಷ್ಟವಾಗಿದ್ದರು.

ಬಿಗ್‌ಬಾಸ್‌ನಲ್ಲಿ ಯಾವಾಗಲೂ ಕಿತ್ತಾಡುತ್ತಿದ್ದ ರಜತ್ ಅವರು ಅಣ್ಣನ ಸ್ಥಾನದಲ್ಲಿ ನಿಂತು ಚೈತ್ರಾಗೆ ಮದುವೆ ಮಾಡಿಸಿದ್ದಾರೆ. ಅದಲ್ಲದೆ ಚೈತ್ರಾ ಅವರು ರಜತ್ ಅವರ ಕಾಲಿ್ಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಅಣ್ಣ ತಂಗಿಯ ಸಂಬಂಧ ಯಾವತ್ತಿಗೂ ಹೀಗೇ ಇರಲಿ ಎಂದು ಆಶೀರ್ವಾದ ಮಾಡಿದ್ದಾರೆ.
 
 
 
 
View this post on Instagram
 
 
 
 
 
 
 
 
 
 
 

A post shared by Mr. D Pictures (@mr.dpictures)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ