ಚಾಮುಂಡೇಶ್ವರಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ, ದರ್ಶನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಉಮಾಪತಿ ಶ್ರೀನಿವಾಸ್
ನನ್ನ ಬಗ್ಗೆ ಕೆಟ್ಟ ಕಮೆಂಟ್ ಮಾಡಿದವರ ವಿರುದ್ಧ ದೂರು ಕೊಟ್ಟೆ ಅಷ್ಟೇ. ಒಂದು ಹಾಳೆ ಮತ್ತು ಪೆನ್‌ನಲ್ಲಿ ಆಗುವ ಕೆಲಸವದು. ನಾನು ಸಾಧಿಸುವುದಕ್ಕಾಗಿ ಹುಟ್ಟಿದ್ದೇನೆ, ಸಾಯೋದಕ್ಕೆ ಅಲ್ಲ. ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದಿದ್ದೇನೆ. ಚಾಮುಂಡೇಶ್ವರಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ ಮಾಡಿಲ್ಲ ಅಂದರೆ ಆಚೆ ಬರಲಿ ಎಂದರು.
ಕೆಟ್ಟ ಕಮೆಂಟ್ ಮಾಡಿದ ಎನ್ನುವ ವಿಚಾರಕ್ಕೆ ಇಂದು ಎಷ್ಟು ಕುಟುಂಬಗಳು ಅನಾಥವಾಗಿದೆ. ದರ್ಶನ್ ನನಗೆ ವೈರಿಯಂತಲ್ಲ. ಅವರ ಮೇಲೆ ವೈಯಕ್ತಿಕ ದ್ವೇಷವಿಲ್ಲ ಎಂದು ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದರು.