ಖ್ಯಾತನಟ ನೀನಾಸಂ ಅಶ್ವಥ್ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲು

ಶುಕ್ರವಾರ, 16 ನವೆಂಬರ್ 2018 (10:08 IST)
ಬೆಂಗಳೂರು : ಸ್ಯಾಂಡಲ್‍ವುಡ್ ಖ್ಯಾತನಟ ನೀನಾಸಂ ಅಶ್ವಥ್ ವಿರುದ್ಧ ಅವರ  ಸ್ನೇಹಿತ ದ್ವಾರಕ ರಜತ್ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ.


ಫಾರ್ಮ್ ಹೌಸ್ ಬಿಸಿನೆಸ್ ನಲ್ಲಿ ಪಾಲುದಾರನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ನೀನಾಸಂ ಅಶ್ವಥ್ ಅವರು ಸ್ನೇಹಿತ ದ್ವಾರಕ ರಜತ್ ಅವರ ಬಳಿ 18 ಲಕ್ಷ ರೂ. ಸಾಲ ಪಡೆದಿದ್ದರು.


ಆದರೆ ಈಗ ಫಾರ್ಮ್ ಹೌಸ್ ಪಾಲುದಾರನಾಗಿ ಮಾಡಿಕೊಳ್ಳದೇ ಹಣವೂ ವಾಪಾಸ್ ನೀಡದೇ ನೀನಾಸಂ ಅಶ್ವಥ್ ಸತಾಯಿಸುತ್ತಿದ್ದಾರೆ. ಅಲ್ಲದೇ ಅವರು ನೀಡಿರುವ ಚೆಕ್ ಕೂಡ  ಬೌನ್ಸ್ ಆಗಿರುವ ಹಿನ್ನೆಲೆಯಲ್ಲಿ ಕೋಪಗೊಂಡ ರಜತ್ ಅವರು ಇದೀಗ ನೀನಾಸಂ ಅಶ್ವಥ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ