ಸಲ್ಮಾನ್ ಖಾನ್ ಗೆ ಪತ್ರ ಬರೆದು ಪುಟಾಣಿ ಅಭಿಮಾನಿ

ಮಂಗಳವಾರ, 26 ಜುಲೈ 2016 (13:56 IST)
ಬಾಲಿವುಡ್ ನ ಅತ್ಯಂತ ಬೇಡಿಕೆಯ ನಟರಲ್ಲಿ ಸಲ್ಮಾನ್ ಖಾನ್ ಅವರು ಕೂಡ ಒಬ್ಬರು. ಸಲ್ಮಾನ್ ಖಾನ್ ಅವರಿಗೆ ಎಲ್ಲಾ ವರ್ಗದ ಅಭಿಮಾನಿಗಳಿದ್ದಾರೆ. ಅದಕ್ಕೆ ಹಿರಿಯು ಕಿರಿಯರು ಅನ್ನೋ ಬೇಧಭಾವವಿಲ್ಲ.ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದ್ದಾರೆ. ಸಲ್ಮಾನ್ ಖಾನ್ ಅವರ ಸುಲ್ತಾನ್ ಸಿನಿಮಾವನ್ನು ನೋಡಿದ ಪುಟಾಣಿ ಅಭಿಮಾನಿಯೊಬ್ಬಳು ಸಲ್ಲುಗೆ ಪತ್ರ ಬರೆದಿದ್ದಾಳೆ.
ಹೌದು...ಏಳು ವರ್ಷದ ಪುಟಾಣಿ ಅನನ್ಯ ಮಂಜುಂದಾರ್ ಗೆ ಸಲ್ಮಾನ್ ಖಾನ್ ಅಂದ್ರೆ ತುಂಬಾನೇ ಅಚ್ಚುಮೆಚ್ಚಂತೆ. ಹಾಗಾಗಿ ಸಲ್ಮಾನ್ ಖಾನ್ ಅವರ ಸುಲ್ತಾನ್ ಸಿನಿಮಾ ರಿಲೀಸ್ ಆದ ದಿನ ಅಂದ್ರೆ ಜುಲೈ 7 ರಂದೇ ಅನನ್ಯ ಸುಲ್ತಾನ್ ಸಿನಿಮಾವನ್ನು ನೋಡಿದ್ದಾಳೆ. ಸಿನಿಮಾ ನೋಡಿದ ಬಳಿಕ ಈಕೆ ಸಲ್ಮಾನ್ ಖಾನ್ ಅವರಿಗೆ ಪತ್ರವೊಂದನ್ನು ಬರೆದಿದ್ದಾಳೆ. ತನ್ನದೇ ಮುದ್ದಾದ ಅಕ್ಷರಗಳಿಂದ ಪತ್ರ ಬರೆದಿರುವ ಅನನ್ಯ ತನಗೆ ಸುಲ್ತಾನ್ ಸಿನಿಮಾ ಯಾಕೆ ಇಷ್ಟ ಆಯ್ತು. ಅದರಲ್ಲಿ ಏನು ಇಷ್ಟವಾಯ್ತು ಅನ್ನೋದನ್ನು ವಿವರಿಸಿದ್ದಾಳೆ.
 
ಇನ್ನು ಮಗಳು ಬರೆದಿರುವ ಪತ್ರವನ್ನು ಆಕೆಯ ತಾಯಿ ದೀಪ್ತಿ ಮಂಜುಂದಾರ್ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.ಅಲ್ಲದೇ ತನ್ನ ಮಗಳು ಸಿನಿಮಾವನ್ನು ನೋಡುವಾಗ ಸುಲ್ತಾನ್ ಗೆದ್ದಾಗ ತುಂಬಾನೇ ಖುಷಿಪಟ್ಟಿದ್ದಳು. ಹಾಗೇ ಸಿನಿಮಾದಲ್ಲಿ ಸುಲ್ತಾನ್ ಗೆ ನೋವಾದಾಗ ತಾನು ಸಿನಿಮಾ ನೋಡ ನೋಡುತ್ತಾ ಅಳುತ್ತಿದ್ದಳು ಅಂತಾ ವಿವರಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ