ಚಿರಂಜೀವಿ ಸರ್ಜಾ ತೀರಿಕೊಂಡರೂ ಸೋಷಿಯಲ್ ಮೀಡಿಯಾ ಖಾತೆ ಜೀವಂತ!

ಶುಕ್ರವಾರ, 19 ಜೂನ್ 2020 (09:14 IST)
ಬೆಂಗಳೂರು: ಚಿರಂಜೀವಿ ಸರ್ಜಾ ಇನ್ನಿಲ್ಲವೆಂಬ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ‍್ಯವಾಗುತ್ತಿಲ್ಲ. ಹೀಗಿರುವಾಗ ಅವರ ಕುಟುಂಬವೂ ಚಿರು ಇನ್ನೂ ನಮ್ಮೊಳಗೇ ಇದ್ದಾರೆ ಎಂಬ ನಂಬಿಕೆಯಲ್ಲೇ ಜೀವನ ನಡೆಸುತ್ತಿದ್ದಾರೆ.


ಇದೀಗ ಚಿರು ಸರ್ಜಾ ತೀರಿಕೊಂಡು 13 ದಿನಗಳೇ ಕಳೆದಿವೆ. ಚಿರು ಇಲ್ಲವಾದ ಬಳಿಕ ಇದೇ ಮೊದಲ ಬಾರಿಗೆ ಪತ್ನಿ ಮೇಘನಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಬರೆದು ತಮ್ಮ ಮನದಾಳದ ದುಃಖ ಹೊರಹಾಕಿದ್ದಾರೆ.

ಆದರೆ ಮೇಘನಾ ಕೇವಲ ತಮ್ಮ ಖಾತೆಯಲ್ಲಿ ಮಾತ್ರ ಪೋಸ್ಟ್ ಮಾಡಿಲ್ಲ. ಪತಿ ಚಿರಂಜೀವಿ ಇನ್ ಸ್ಟಾಗ್ರಾಂ ಪುಟದಲ್ಲೂ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಚಿರು ತೀರಿಕೊಂಡ ಇಷ್ಟು ದಿನದ ಬಳಿಕ ಅವರ ಖಾತೆಯಲ್ಲಿ ಪೋಸ್ಟ್ ನೋಡಿ ಅಭಿಮಾನಿಗಳೂ ಅಚ್ಚರಿ ಜತೆಗೆ ಖುಷಿಪಟ್ಟಿದ್ದಾರೆ. ಈ ಮೂಲಕ ಚಿರು ತೀರಿಕೊಂಡರೂ ಅವರ ಸೋಷಿಯಲ್ ಮೀಡಿಯಾ ಖಾತೆ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ ಮೇಘನಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ