ನಿರ್ದೇಶಕ ನಾಗಶೇಖರ್ ತಮಾಷೆ ಮಾಡಲು ಹೋಗಿ ವಿವಾದಕ್ಕೊಳಗಾದ ನಾಗತಿಹಳ್ಳಿ ಚಂದ್ರಶೇಖರ್

ಗುರುವಾರ, 18 ಜೂನ್ 2020 (10:00 IST)
ಬೆಂಗಳೂರು: ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೆಶಕ ನಾಗಶೇಖರ್ ಬಗ್ಗೆ ತಮಾಷೆಯಾಗಿ ಮಾತನಾಡಲು ಹೋಗಿ ವಿವಾದಕ್ಕೊಳಗಾಗಿದ್ದಾರೆ.

 

ಕೊಂಚ ಕಪ್ಪು ಬಣ್ಣದವರಾದ ನಾಗಶೇಖರ್ ಬಿಳಿ ಬಣ್ಣದ ಕಾರಿನ ಬಳಿ ನಿಂತಿರುವ ಫೋಟೋ ಪ್ರಕಟಿಸಿದ್ದರು. ಇದಕ್ಕೆ ಕಾಮೆಂಟ್ ಮಾಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ನಾಗಶೇಖರ್ ಮೈ ಬಣ್ಣವನ್ನು ಉಲ್ಲೇಖಿಸಿ ತಮಾಷೆ ಮಾಡಿದ್ದರು. ನಾಗತಿಹಳ್ಳಿ ತಮಾಷೆಯಾಗಿ ಹೇಳಿದರೂ ನೆಟ್ಟಿಗರಿಗೆ ಇದು ಇಷ್ಟವಾಗಿಲ್ಲ.

ಇದಕ್ಕೆ ವರ್ಣಬೇಧದ ಸಂಬಂಧ ಕಲ್ಪಿಸಿದ ನೆಟ್ಟಿಗರು ಈ ರೀತಿ ಒಬ್ಬರ ಮೈ ಬಣ‍್ಣ ಉಲ್ಲೇಖಿಸಿ ತಮಾಷೆ ಮಾಡಬೇಡಿ. ಇದು ಗಂಭೀರ ವಿಷಯ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ